ETV Bharat / state

ವಾಯುಪಡೆ ಸೇರುವವರಿಗೆ ಸುವರ್ಣವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ - ಈಟಿವಿ ಭಾರತ ಕನ್ನಡ

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಹಾಗೂ ಜನವರಿ 2023 ರಲ್ಲಿ ನಡೆಯುವ ಆನ್‌ಲೈನ್ ಆಯ್ಕೆ ಪರೀಕ್ಷೆಗಾಗಿ, ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

application-invited-for-agniveer-vayu-post
ವಾಯುಪಡೆ ಸೇರುವವರಿಗೆ ಸುವರ್ಣವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ
author img

By

Published : Nov 9, 2022, 10:32 PM IST

ಕಾರವಾರ : ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುವ ಅವಿವಾಹಿತ ಯುವಕ, ಯುವತಿಯರಿಗೆ ಅಗ್ನಿಪಥ್ ಯೋಜನೆಯಡಿ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಹಾಗೂ ಜನವರಿ 2023 ರಲ್ಲಿ ನಡೆಯುವ ಆನ್‌ಲೈನ್ ಆಯ್ಕೆ ಪರೀಕ್ಷೆಗಾಗಿ, ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 27 ಜೂನ್ 2002 ರಿಂದ 27 ಡಿಸೆಂಬರ್ 2005 ರ ನಡುವೆ (ಎರಡೂ ದಿನಾಂಕಗಳನ್ನು ಒಳಗೊಂಡಂತೆ) ಜನಿಸಿದವರಾಗಿರಬೇಕು. ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನೋಂದಣಿಗಾಗಿ https://agnipathvayu.cdac.in ನ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ನವೆಂಬರ್​ 23 ಕೊನೆಯ ದಿನವಾಗಿರುತ್ತದೆ.

ವಿದ್ಯಾರ್ಹತೆ, ಇತರ ಹೆಚ್ಚಿನ ವಿವರಗಳಗಾಗಿ https://careerindianairforce.cdac.in ನ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ.. ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.