ETV Bharat / state

ಭಟ್ಕಳದಲ್ಲಿ ನೇತ್ರಾವತಿ ಎಕ್ಸ್​​ಪ್ರೆಸ್ ರೈಲು​ ಖಾಯಂ ನಿಲುಗಡೆಗೆ ಆಗ್ರಹ - ಭಟ್ಕಳ ಲೇಟೆಸ್ಟ್​ ನ್ಯೂಸ್

ಭಟ್ಕಳವು ತಾಲೂಕು ಕೇಂದ್ರವಾದ ಕಾರಣ ಭಟ್ಕಳದಲ್ಲಿ ನೇತ್ರಾವತಿ ಎಕ್ಸ್​​ಪ್ರೆಸ್ ರೈಲನ್ನು ನಿಲುಗಡೆ ಮಾಡಬೇಕು ಹಾಗೂ ರೈಲು ಆದಾಯ ತರುವ ಪ್ಲಾಟ್ ಫಾರಂ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಕ್ರಿಯಾಶೀಲ ಗೆಳೆಯರ ಸಂಘ ಮತ್ತು ರೈಲು ಬಳಕೆದಾರರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

appeal-for-a-permanent-stop-on-the-netravati-express-train-at-bhatkal
ಭಟ್ಕಳದಲ್ಲಿ ನೇತ್ರಾವತಿ ಎಕ್ಸ್​​ಪ್ರೆಸ್ ರೈಲನ್ನು​ ಖಾಯಂ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಮನವಿ
author img

By

Published : Jan 7, 2021, 3:48 PM IST

ಭಟ್ಕಳ (ಉತ್ತರ ಕನ್ನಡ): ಕೊಂಕಣ ರೈಲ್ವೆಯ ಹಳಿಯಲ್ಲಿ ಹಾದುಹೋಗುವ ನೇತ್ರಾವತಿ ಎಕ್ಸ್​​ಪ್ರೆಸ್​ ರೈಲನ್ನು ಭಟ್ಕಳದಲ್ಲಿ ಖಾಯಂ ಆಗಿ ನಿಲುಗಡೆ ಮಾಡಬೇಕು ಹಾಗೂ ಭಟ್ಕಳದಲ್ಲಿ ರೈಲ್ವೆ ಪ್ಲಾಟ್ ಫಾರಂ ಟಿಕೆಟ್​ ನೀಡಬೇಕೆಂದು ಆಗ್ರಹಿಸಿ ಕ್ರಿಯಾಶೀಲ ಗೆಳೆಯರ ಸಂಘ ಮತ್ತು ರೈಲು ಬಳಕೆದಾರರ ಸಂಘದ ಸದಸ್ಯರು ಆರ್​​​ಆರ್​​ಎಂನ ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಭಟ್ಕಳದಲ್ಲಿ ನೇತ್ರಾವತಿ ಎಕ್ಸ್​​ಪ್ರೆಸ್ ರೈಲನ್ನು​ ಖಾಯಂ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಮನವಿ

ಹಲವು ವರ್ಷಗಳಿಂದ ಭಟ್ಕಳದ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್​​ಪ್ರೆಸ್​ ರೈಲಿಗೆ (06346/06345) ನಿಲುಗಡೆ ನೀಡಲಾಗಿತ್ತು. ಈಗ ಈ ರೈಲು ನಿಲುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಭಟ್ಕಳದಿಂದ ಸಾವಿರಾರು ಪ್ರಯಾಣಿಕರು ಈ ರೈಲಿನ ಮೂಲಕ ಮುಂಬೈ ಹಾಗೂ ಕೇರಳದ ಕಡೆಗೆ ಪ್ರಯಾಣಿಸುತ್ತಿದ್ದಾರೆ. ಮುಂಬೈ ಹಾಗೂ ಕೇರಳದಿಂದ ಸಾವಿರಾರು ಉದ್ಯಮಿಗಳು ಹಾಗೂ ಪ್ರವಾಸಿಗರು ಭಟ್ಕಳದ ಸುತ್ತಮುತ್ತಲಿನ ಪ್ರದೇಶಕ್ಕೆ ಆಗಮಿಸುತ್ತಾರೆ.

ಭಟ್ಕಳವು ತಾಲೂಕು ಕೇಂದ್ರವಾದ ಕಾರಣ ಭಟ್ಕಳದಲ್ಲಿ ನೇತ್ರಾವತಿ ಎಕ್ಸ್​​ಪ್ರೆಸ್ ರೈಲು ನಿಲುಗಡೆ ಮಾಡಬೇಕು ಹಾಗೂ ರೈಲು ಇಲಾಖೆಗೆ ಆದಾಯ ತರುವ ಪ್ಲಾಟ್ ಫಾರಂ ಟಿಕೆಟ್ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.