ಕಾರವಾರ (ಉತ್ತರಕನ್ನಡ): ಮಹಾರಾಷ್ಟ್ರದಿಂದ ಆಗಮಿಸಿದ ಮತ್ತೊಬ್ಬರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
16 ವರ್ಷದ ಯುವತಿಗೆ ಸೋಮವಾರ ಸೋಂಕು ಕಾಣಿಸಿಕೊಂಡಿತ್ತು. ಆಕೆಯ ತಂದೆಯಲ್ಲಿ ಇಂದು ಕೊರೊನಾ ಪತ್ತೆಯಾಗಿದೆ. ಇವರು ಶಿವಮೊಗ್ಗದ ಸೊರಬದವರು. ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಇವರ ಕುಟುಂಬ ಮೇ 14ರಂದು ಕಿರವತ್ತಿ ಚೆಕ್ಪೋಸ್ಟ್ ಮೂಲಕ ಯಲ್ಲಾಪುರದ ಸಂಬಂಧಿಕರ ಮನೆಗೆ ಹೊರಟಿದ್ದರು.
ಮಹಾರಾಷ್ಟ್ರದಿಂದ ಆಗಮಿಸಿದ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಕ್ವಾರಂಟೈನ್ಗೆ ಒಳಪಡಿಸಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57ಕ್ಕೆ ತಲಿಪಿದೆ. 44 ಸಕ್ರಿಯ ಪ್ರಕರಣಗಳಿವೆ.