ಶಿರಸಿ: ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಶಿರಸಿಯ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿದರು.
ತಮ್ಮ ಸ್ನೇಹಿತರೊಂದಿಗೆ ಸೋದೆ ಮಠಕ್ಕೆ ಆಗಮಿಸಿದ ಅಣ್ಣಾಮಲೈ ಶ್ರೀಗಳೊಂದಿಗೆ ಆಧ್ಯಾತ್ಮದ ಬಗ್ಗೆ ಚರ್ಚೆ ನಡೆಸಿದ್ರು. ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳರಿಂದ ಮಂತ್ರಾಕ್ಷತೆ ಪಡೆದರು.
![Annamalai](https://etvbharatimages.akamaized.net/etvbharat/prod-images/kn-srs-01-annamalai-bheti-av-ka10005_01092019183131_0109f_1567342891_485.jpg)
ಶ್ರೀ ಮಠದ ವಿವಿಧ ಭಕ್ತರನ್ನು ಆತ್ಮೀಯವಾಗಿ ಮಾತನಾಡಿಸಿದ ಸಿಂಗಂ, ಮಠದ ಇತಿಹಾಸವನ್ನು ತಿಳಿದುಕೊಂಡರು. ಬೆಂಗಳೂರು ದಕ್ಷಿಣ ವಿಭಾದ ಡಿಸಿಪಿಯಾಗಿದ್ದ ಅಣ್ಣಾಮಲೈ ಕಳೆದ ಮೇ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು.