ETV Bharat / state

ಕರ್ನಾಟಕದ ಮಹಿಳೆಯ ಸ್ವಚ್ಛತಾ ಕಾರ್ಯಕ್ಕೆ ಆನಂದ್​ ಮಹೀಂದ್ರ ಸಲಾಂ: ಇವರೇ ಭವ್ಯ ಭಾರತದ ಹೀರೋಗಳು ಎಂದ ಉದ್ಯಮಿ - Anand Mahindra appreciates

ಉದ್ಯಮಿ ಆನಂದ್​ ಮಹೀಂದ್ರ ಕರ್ನಾಟಕದ ಮಹಿಳೆಯೊಬ್ಬರ ಸ್ವಚ್ಛತಾ ಕಾರ್ಯ ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇವರು ನಮ್ಮ ಸ್ವಚ್ಛ ಭಾರತ್ ಅಭಿಯಾನವನ್ನು ಕಾರ್ಯರೂಪಕ್ಕೆ ತರುತ್ತಿರುವ ನಿಜವಾದ ಹೀರೋಗಳು ಎಂದು ಟ್ವೀಟ್​ಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.

Anand Mahindra appreciates women's cleanliness work

author img

By

Published : Apr 12, 2023, 1:47 PM IST

ಕಾರವಾರ (ಉತ್ತರ ಕನ್ನಡ): ಇಲ್ಲಿನ ಹಣ್ಣು ಮಾರಾಟಗಾರ್ತಿಯೊಬ್ಬರ ಸ್ವಚ್ಛತಾ ಕಾರ್ಯವನ್ನು ಮೆಚ್ಚಿ ಖ್ಯಾತ ಉದ್ಯಮಿ ಆನಂದ್​ ಮಹೀಂದ್ರ ಟ್ವೀಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಸ ಮುಕ್ತ ಮಾಡುವ ಭಾರತದ ನಿಜವಾದ ಹೀರೋಗಳು ಇವರೇ ಎಂದು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಅಂಕೋಲಾದ ಹಾಲಕ್ಕಿ ಮಹಿಳೆ ಮೋಹಿನಿ ಗೌಡ ಈ ಪ್ರಶಂಸೆಗೊಳಗಾದ ಮಹಿಳೆ. ಅಂಕೋಲಾದ ಬಸ್​ ನಿಲ್ದಾಣದಲ್ಲಿ ಹಣ್ಣು ಮಾರಾಟ ಮಾಡುವ ಮೋಹಿನಿ ಗೌಡ, ಕಸ ಹಾಗೂ ಎಲೆಗಳನ್ನು ಸಂಗ್ರಹಿಸಿ ಕಸದ ಬಿಟ್ಟಿಗೆ ಹಾಕುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಮಾದರಿಯಾಗಿದ್ದಾರೆ. ಸರಳ ಸ್ವಭಾವದ ಈ ಮಹಿಳೆಯ ಸ್ವಚ್ಛತಾ ಮನೋಭಾವನೆ ಕಂಡು ಆದರ್ಶ ಹೆಗಡೆ ಎನ್ನುವವರು ಟ್ವೀಟ್​ ಮಾಡಿದ್ದರು. ಟ್ವೀಟ್​ ಜೊತೆಗೆ ಕೆಲವು ಸಾಲುಗಳನ್ನು ಬರೆಯುವ ಮೂಲಕ ಮಹಿಳೆಯ ಈ ಕಾರ್ಯವನ್ನು ಕೊಂಡಾಡಿದ್ದರು.

  • These are the real, quiet heroes making Bharat Swachh. I really would like her to know that her efforts have not gone unnoticed & are appreciated. How do you suggest we can do that? @adarshahgd can you find someone who lives in that area & can contact her? https://t.co/2SzlTE9LZy

    — anand mahindra (@anandmahindra) April 11, 2023 " class="align-text-top noRightClick twitterSection" data=" ">

'ಈ ಮಹಿಳೆ ಹಣ್ಣು ಮಾರಾಟಗಾರಳಾಗಿದ್ದು, ಪ್ರತಿದಿನ ಇಲ್ಲಿನ ಬಸ್ ನಿಲ್ದಾಣದಲ್ಲಿ ಎಲೆಗಳಲ್ಲಿ ಸುತ್ತಿ ಹಣ್ಣುಗಳನ್ನು ಮಾರಾಟ ಮಾಡಿ ತಮ್ಮ ಜೀವನಚನ್ನು ಸಾಗಿಸುತ್ತಾರೆ. ಕೆಲವರು ಹಣ್ಣನ್ನು ತಿಂದು ಎಲೆಯನ್ನು ಬಸ್​ನ ಕಿಟಕಿಯಿಂದ ಹೊರಗೆ ಎಸೆಯುತ್ತಾರೆ. ಹೊರಗೆ ಎಸೆದ ಎಲೆಗಳನ್ನು ಈ ಮಹಿಳೆ ಆರಿಸಿಕೊಂಡು ಹೋಗಿ ಕಸದ ಬುಟ್ಟಿಗೆ ಹಾಕಿದ್ದಾರೆ. ಹಾಗಂತ ಅವರು ಕಸಗೂಡಿಸಯವ ಅಥವಾ ಸ್ವಚ್ಛ ಮಾಡುವ ಮಹಿಳೆ ಅಲ್ಲ. ಆದರೂ ಅವರು ಈ ಕೆಲಸವನ್ನು ಮಾಡುತ್ತಾರೆ' ಎಂದು ಮೋಹಿನಿ ಗೌಡ ಅವರ ಸ್ವಚ್ಛತಾ ಕಾರ್ಯವನ್ನು ಆದರ್ಶ ಹೆಗಡೆ ಹೊಗಳಿದ್ದರು. ಈ ವಿಡಿಯೋ ಟ್ವೀಟ್​ ಅನ್ನು ಉದ್ಯಮಿ ಆನಂದ್‌ ಮಹೀಂದ್ರಾ ರಿ-ಟ್ವೀಟ್ ಮಾಡಿದ್ದಲ್ಲದೇ ಆ ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • This lady is fruit seller & she sells fruits wrapped in leaves at Ankola Bus stand,Karnataka. Some people after finish eating they throw the leaves from bus window. But this lady goes there picks up the leaves and puts it in dustbin. Its not her work but she's doing it. 🙂🙏👍 pic.twitter.com/TaqQUGZuxP

    — Adarsh Hegde (@adarshahgd) April 10, 2023 " class="align-text-top noRightClick twitterSection" data=" ">

'ಇವರು ನಮ್ಮ ಸ್ವಚ್ಛ ಭಾರತ್ ಅಭಿಯಾನವನ್ನು ಕಾರ್ಯರೂಪಕ್ಕೆ ತರುತ್ತಿರುವ ನಿಜವಾದ ಹೀರೋಗಳು. ಈ ಮಹಿಳೆಯ ಶ್ರಮ ಎಲ್ಲೂ ಗುರುತಿಸದೇ ಹೋಗಬಾರದು ಎಂದು ನಾನು ಬಯಸುವೆ. ಜೊತೆಗೆ ಅವರ ಈ ಮೌಲ್ಯಯುತ ಕಾಯಕವನ್ನು ನಾನು ಮನಸಾರೆ ಶ್ಲಾಘಿಸುವೆ. ಇವರ ಶ್ರಮ ವ್ಯರ್ಥವಾಗಲು ನಾವು ಬಿಡಬಾರದು. ಇಂತವರಿಗೆ ನೆರವಾಗಬೇಕು. ಹೇಗೆ ನೆರವಾಗಬೇಕು ಅನ್ನೋದರ ಬಗ್ಗೆ ಸಲಹೆಗಳಿದ್ದರೆ ನೀಡಿ' ಎಂದು ಮೂಲ ಪೋಸ್ಟ್ ಹಾಕಿದ ಆದರ್ಶ ಹೆಗ್ಡೆ ಅವರಿಗೆ ವಿಡಿಯೋ ಟ್ಯಾಗ್ ಮಾಡಿದ್ದಾರೆ. ಅಲ್ಲದೇ 'ಆ ಪ್ರದೇಶದಲ್ಲಿ ವಾಸಿಸುವ ಯಾರಾನ್ನಾದರು ನೀವು ಸಂಪರ್ಕಿಸಿ ಆಕೆಯನ್ನು ಹುಡುಕಬಹುದೇ' ಎಂದು ಸಹ ಆದರ್ಶ ಹೆಗ್ಡೆ ಅವರಿಗೆ ಕೇಳಿದ್ದಾರೆ.

ಆನಂದ್‌ ಮಹೀಂದ್ರಾ ಅವರು ಹೊಸತವನ್ನು ಗುರುತಿಸುವ ಹಾಗೂ ಸ್ಫೂರ್ತಿದಾಯಕ ಟ್ವೀಟ್​ ಮಾಡುವುದು ಇದೇ ಮೊದಲೇನು ಅಲ್ಲ. ಇದಕ್ಕೂ ಮುನ್ನ ಅವರು ಸಾಕಷ್ಟು ಟ್ವೀಟ್​ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಪ್ರವಾಹ ಉಂಟಾದಾಗ ಅದೆಷ್ಟೋ ಜನ ಜಲಾವೃತಗೊಂಡಿರುವ ರಸ್ತೆಗಳನ್ನು ದಾಟಲು ಟ್ರ್ಯಾಕ್ಟರ್​, ಬುಲ್ಡೋಜರ್​​ ಮೊರೆ ಹೋಗಿದ್ದರು. ಆ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದರು. ಮನಸ್ಸಿದ್ದರೆ ಮಾರ್ಗ ಎಂದು ಶೀರ್ಷಿಕೆ ಸಹ ಬರೆದುಕೊಂಡಿದ್ದರು. ಹರ್ ಘರ್ ತಿರಂಗ ಉತ್ಸಾಹಕ್ಕೆ ಮನಸೋತ ಅವರು, ವೃದ್ಧ ದಂಪತಿ ತಮ್ಮ ಮನೆಯ ಛಾವಣಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಫೋಟೋ ಸಹ ಶೇರ್​ ಮಾಡಿಕೊಂಡಿದ್ದರು.

ಈ ರೀತಿಯ ಅದೆಷ್ಟೋ ಹೊಸತನವನ್ನು ಅವರು ಆಗಾಗ ನೆಟ್ಟಿಗರ ಮುಂದೆ ಇಡುತ್ತಲೇ ಇರುತ್ತಾರೆ. ಇದೀಗ ಉತ್ತರ ಕನ್ನಡದ ಮಹಿಳೆಯ ಸ್ವಚ್ಛತಾ ಕಾರ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಜಾಗ ಪಡೆದಿದ್ದು ನೆಟಿಜನ್​ಗಳು ಸಹ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.

ಇದನ್ನೂ ಓದಿ: ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಿ ಶಾರುಖ್ ಖಾನ್​​ ಪುತ್ರಿ: ಜಾಲತಾಣದಲ್ಲಿ ಚರ್ಚೆ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.