ETV Bharat / state

ದೇವಸ್ಥಾನದ ಚಿನ್ನಾಭರಣವನ್ನು ಫೈನಾನ್ಸ್​ನಲ್ಲಿ ಅಡವಿಟ್ಟ ಖದೀಮ ಅಂದರ್​

author img

By

Published : Oct 31, 2020, 4:25 PM IST

ದೇವಸ್ಥಾನದಲ್ಲಿ ನುಗ್ಗಿ ಚಿನ್ನಾಭರಣವನ್ನು ಎಗರಿಸಿ ಮಣಪುರಂ ಮತ್ತು ಮುತ್ತೂಟ್ ಫೈನಾನ್ಸ್​ಗಳಲ್ಲಿ ಇಟ್ಟಿದ್ದ ಖದೀಮನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯಿಂದ 513.8 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ..

A theft accused arrested in Bhatkal
ಬಂಧಿತ ಆರೋಪಿ ಸತೀಶ ಭಟ್

ಭಟ್ಕಳ : ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಇಲ್ಲಿನ ಪೊಲೀಸರು, ಆರೋಪಿಯಿಂದ 513.8 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

A theft accused arrested in Bhatkal
ವಶಪಡಿಸಿಕೊಳ್ಳಲಾದ ಚಿನ್ನಾಭರಣ

ಯಲ್ಲಾಪುರ ಮೂಲದ ಸತೀಶ ಭಟ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಧಿತನನ್ನು ಅ. 23 ರಂದು ಪೊಲೀಸ್​ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಕದ್ದ ಚಿನ್ನಾಭರಣವನ್ನು ಯಲ್ಲಾಪುರದ ಮಣಪುರಂ ಫೈನಾನ್ಸ್​ ಮತ್ತು ಮುತ್ತೂಟ್ ಫೈನಾನ್ಸ್​ನಲ್ಲಿ ಅಡವಿಟ್ಟ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಕಳ್ಳತನ ಮಾಡಿದ್ದ ಆರೋಪಿ ಬಂಧನ

ಹಣ ಪಡೆದಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಮಣಪುರಂ ಮತ್ತು ಮುತ್ತೂಟ್ ಫೈನಾನ್ಸ್​ಗಳಿಗೆ ತೆರಳಿದ ಪೊಲೀಸರು ಒಟ್ಟು 23 ಬಗೆಯ 24,15,340 ರೂಪಾಯಿಯ 513.8 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.