ಕಾರವಾರ : ಒಂದು ದೇಹ ಎರಡು ಮುಖಗಳನ್ನೊಳಗೊಂಡಿರುವ ಶಂಕರನಾರಾಯಣ ದೇವರ ವಿಗ್ರವಿದ್ದು, ದೇಶದಲ್ಲಿಯೇ ಎಲ್ಲಿಯೂ ಕಾಣಸಿಗದ ಈ ವಿಗ್ರಹ ಕುಮಟಾ ಪಟ್ಟಣದ ಭಸ್ತಿಕೇರಿಯಲ್ಲಿದೆ, ದೇವರಿಗೆ ಕಾರ್ತಿಕ ಅಮವಾಸೆಯಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷ ಕಾರ್ತಿಕ ಅಮವಾಸೆ ದಿನ ನಡೆಯುವ ವನಭೋಜನ ಕಾರ್ಯಕ್ರಮ ವಿಶೇಷವಾಗಿದ್ದಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಧಾತ್ರಿ ಹವನ, ದುರ್ಗಾ ಚಂಡಿಕಾ ಯಾಗ, ಮಯೂರಿಕಾ ಪೂಜೆ, ಮಹಾಪೂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ದೇವಾಲಯದಲ್ಲಿ ಸುಮಾರು ಎರಡು ಸಾವಿರ ವರ್ಷಕ್ಕೂ ಹಳೆಯದಾದ ಶಂಕರ ಮತ್ತು ನಾರಾಯಾಣ ಎಂಬ ಎರಡು ಮುಖವನ್ನು ಹೊಂದಿರುವ ವಿಗ್ರಹ ಇದ್ದು, ಇಂತಹ ಪುರುತಾನ ವಿಗ್ರಹವನ್ನು ಹೊಂದಿರುವ ಕ್ಷೇತ್ರ ಇದೀಗ ಭಕ್ತರ ಪಾಲಿಗೆ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ, ಬೇಡಿದ್ದನ್ನು ಕರುಣಿಸುವ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ. ದೇವಾಲಯಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಭಕ್ತರು ಆಗಮಿಸುತ್ತಾರೆ.