ETV Bharat / state

ಪಿಎಸ್‌ಐ ನಿಂದಿಸಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಆರೋಪ - ದೂರು ದಾಖಲು

ಭಟ್ಕಳ ತಾಲೂಕಿನ ಹಸ್ರವಳ್ಳಿಯಲ್ಲಿ ಪಿಎಸ್‌ಐವೊಬ್ಬರು ನಿಂದಿಸಿದ್ದಕ್ಕೆ ಮನನೊಂದು ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

suicide
ಆತ್ಮಹತ್ಯೆ
author img

By ETV Bharat Karnataka Team

Published : Oct 20, 2023, 12:47 PM IST

ಹಸ್ರವಳ್ಳಿಯಲ್ಲಿ ಮನನೊಂದು ವ್ಯಕ್ತಿ ಆತ್ಮಹತ್ಯೆ

ಭಟ್ಕಳ : ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐವೊಬ್ಬರು ಸಾರ್ವಜನಿಕವಾಗಿ ನಿಂದಿಸಿದ್ದನ್ನು ಮನಸ್ಸಿಗೆ ಹಚ್ಚಿಕೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಭಟ್ಕಳ ತಾಲೂಕಿನ ಹಸ್ರವಳ್ಳಿಯಲ್ಲಿ ಘಟನೆ ನಡೆದಿದೆ.

ಪಟ್ಟಣದ ಮಣ್ಕುಳಿ ನಿವಾಸಿ ಕಲ್ಮರ್ಗಿಮನೆ ಮಾರುತಿ ನಾಗಪ್ಪ ನಾಯ್ಕ (63) ಆತ್ಮಹತ್ಯೆ ಮಾಡಿಕೊಂಡವರು. ಇವರು ತಮ್ಮ ಹಸ್ರವಳ್ಳಿಯ ತೋಟದ ಮನೆಯಲ್ಲಿ ನಸುಕಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಕ್ ಅಪಘಾತದ ವಿಚಾರವಾಗಿ ಪಿಎಸ್‌ಐವೊಬ್ಬರು ಸಾರ್ವಜನಿಕವಾಗಿ ಇವರನ್ನು ನಿಂದಿಸಿ, ವಾಹನದ ಕೀ ಕಸಿದುಕೊಂಡು ಅವಮಾನಿಸಿದ್ದರು ಎಂದು ತಿಳಿದು ಬಂದಿತ್ತು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಮಾರುತಿ ನಾಯ್ಕ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೃತನ ಸಹೋದರ ಮಣ್ಕುಳಿ ಸುಬ್ರಾಯ ನಾಗಪ್ಪ ನಾಯ್ಕ ಅವರು ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೃತರ ಸಹೋದರ ಸುಬ್ರಾಯ ನಾಗಪ್ಪ ನಾಯ್ಕ, "ಅಪಘಾತವೊಂದರ ವಿಚಾರವಾಗಿ ಆಟೋ ರಿಕ್ಷಾ ಚಾಲಕರು ಮತ್ತೆ ನನ್ನ ತಮ್ಮನ ಮಧ್ಯೆ ರಾಜಿ ನಡೆದಿದ್ದರೂ ಸಹ ಶಹರ ಠಾಣೆಯ ಪಿಎಸ್ಐ ಅವರು ಸಹೋದರನಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿ ಅವಮಾನಿಸಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಆತ, ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ; ತನಿಖೆಯಲ್ಲಿ ಗೊತ್ತಾಗಲಿ: ಸಚಿವ ಶರಣಪ್ರಕಾಶ ಪಾಟೀಲ್

ಸ್ಟೇಟ್ ಬ್ಯಾಂಕ್ ಅಡೆಂಡರ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಾರುತಿ, 2 ವರ್ಷದ ಹಿಂದೆ ನಿವೃತ್ತಿ ಹೊಂದಿದ್ದರು. ನಾನು ಗದ್ದೆ ಕೆಲಸ ಮಾಡಿ ಜೀವನ ನಡೆಸಿಕೊಂಡು ಬಂದಿದ್ದು, ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತನ್ನ ಪಿಎಫ್ ಹಣದಿಂದ ಮದುವೆ ಮಾಡಿಸುವುದಾಗಿ ಹೇಳಿದ್ದ. ಆದರೆ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಹೋದರನ ಸಾವಿಗೆ ಪಿಎಸ್ಐ ಅವರೇ ಕಾರಣ ಎಂದು ಆರೋಪಿಸಿ‌ದ್ದಾರೆ.

ನಾಮಧಾರಿ ಸಮಾಜದಿಂದ ಸೂಕ್ತ ತನಿಖೆಗೆ ಆಗ್ರಹ : ಒಬ್ಬ ಹಿರಿಯ ನಾಗರಿಕರ ಜೊತೆ ಶಹರ ಠಾಣೆ ಪಿಎಸ್ಐ ನಡೆದುಕೊಂಡ ವರ್ತನೆ ಸರಿಯಲ್ಲ. ಬ್ಯಾಂಕ್​ನಲ್ಲಿ 35 ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯ ಬಳಿ ಈ ರೀತಿ ಮಾತನಾಡುವುದು ಸಮಂಜಸವಲ್ಲ. ಪಿಎಸ್ಐ ಅವರ ಮಾತಿನ ದಾಟಿಯು ಹಿರಿಯ ನಾಗರಿಕರಾದ ಮಾರುತಿ ನಾಯ್ಕ ಅವರಿಗೆ ಮಾನಸಿಕವಾಗಿ ನೋವಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮಾಡಿದೆ. ಅಷ್ಟೇ ಅಲ್ಲದೇ, ಆಟೋ ರಿಕ್ಷಾ ಮತ್ತು ಮಾರುತಿ‌ ನಾಯ್ಕ ಅವರ‌ ಬೈಕ್ ನಡುವೆ ನಡೆದ ಅಫಘಾತ ಬಗ್ಗೆ ದೂರು ದಾಖಲಾಗಿಲ್ಲ. ಆದರೂ ಮಾರುತಿ ಅವರ ಬೈಕ್​ ಅನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ 60 ಬಸ್​ಗಳ ಒಡೆಯ ಆತ್ಮಹತ್ಯೆ.. ಸಾಲು ಸಾಲು ಬಸ್​ಗಳೊಂದಿಗೆ ಮಾಲೀಕನ ಅಂತಿಮಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.