ETV Bharat / state

ಕಾರವಾರದಲ್ಲಿ ಬೃಹತ್ ಗಾತ್ರದ ಹೆಬ್ಬಾವು: ಸುರಕ್ಷಿತವಾಗಿ ಕಾಡಿಗೆ ತಲುಪಿಸಿದ ಗ್ರಾಮಸ್ಥರು - karavara latest news

ಕಾರವಾರದ ಬಳಿ ಸುಮಾರು ೧೨ ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಶೇಖರ ಚಿಪ್ಕರ್ ಎಂಬುವವರ ಮನೆಯ ಬೇಲಿಯೊಳಗೆ ಸೇರಿಕೊಂಡಿದ್ದು,ಇದನ್ನು ಕಂಡಿರುವ ಗ್ರಾಮಸ್ಥರು ಹೆದರಿದ್ದಾರೆ, ಆದರೆ, ತದನಂತರ ಇದನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಲಾಗಿದೆ.

ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿದ ಗ್ರಾಮಸ್ಥರು
author img

By

Published : Aug 2, 2019, 2:26 PM IST

Updated : Aug 2, 2019, 3:30 PM IST

ಕಾರವಾರ: ಮನೆಯ ಕಾಂಪೌಂಡ್ ಒಳಗೆ ಸೇರಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಿಸಿ ಕಾಡಿಗೆ ತಲುಪಿಸಿರುವ ಘಟನೆ ಕಾರವಾರ ಕೊಡಿಭಾಗದ ಪಂಚರೇಸಿ ವಾಡಾದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿದ ಗ್ರಾಮಸ್ಥರು

ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಶೇಖರ ಚಿಪ್ಕರ್ ಎಂಬುವವರ ಮನೆಯ ಬೇಲಿಯೊಳಗೆ ಸೇರಿಕೊಂಡಿತ್ತು‌. ಇದನ್ನು ನೋಡಿದ ಮನೆಯವರು ಹೌಹಾರಿದ್ದಾರೆ. ತಕ್ಷಣ ಉರಗ ಪ್ರೇಮಿ ರವಿ ಎಂಬುವವರಿಗೆ ತಿಳಿಸಿದ್ದು, ಹಾವನ್ನು ಕಾರ್ಯಾಚರಣೆ ಮೂಲಕ ಹಿಡಿದು ಕಾಡಿಗೆ ಬಿಡಲಾಗಿದೆ.

ಹೆಬ್ಬಾವು ಇರುವುದನ್ನು ತಿಳಿದು ಹಲವರು ನೋಡಲು ಓಡಿ ಬಂದಿದ್ದರು. ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವು ಇದೇ ಮೊದಲ ಬಾರಿ ನೋಡುತ್ತಿದ್ದೇವೆ. ಹಾವು ಇರುವುದನ್ನು ಗಮನಿಸದೇ ಇದ್ದಲ್ಲಿ ಅಪಾಯ ಸಂಭವಿಸುವ ಆತಂಕವಿತ್ತು. ಅದೃಷ್ಟವಶಾತ್ ಯಾರಿಗೂ ಏನು ಮಾಡಿಲ್ಲ ಎಂದು ಮನೆಯ ಮಾಲೀಕ ಶೇಖರ ನಿಟ್ಟುಸಿರುಬಿಟ್ಟರು.

Intro:Body:ಬೃಹತ್ ಗಾತ್ರದ ಹೆಬ್ಬಾವು ನೋಡಿ ಹೌಹಾರಿದ ಜನ... ರಕ್ಷಿಸಿ ಕಾಡಿಗೆ
ಕಾರವಾರ: ಮನೆಯ ಕಾಂಪೌಂಡ್ ಒಳಗೆ ಸೇರಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಿಸಿರುವ ಘಟನೆ ಕಾರವಾರ ಕೊಡಿಭಾಗದ ಪಂಚರೇಸಿ ವಾಡಾದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸುಮಾರು ೧೨ ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಶೇಖರ ಚಿಪ್ಕರ್ ಎಂಬುವವರ ಮನೆಯ ಬೆಲಿಯೊಳಗೆ ಸೇರಿಕೊಂಡಿತ್ತು‌. ಇದನ್ನು ನೋಡಿ ಮನೆಯವರು ಹೌಹಾರಿದ್ದಾರೆ. ತಕ್ಷಣ ಉರಗ ಪ್ರೇಮಿ ರವಿ ಎಂಬುವವರಿಗೆ ತಿಳಿಸಿ ಹಾವನ್ನು ಕಾರ್ಯಾಚರಣೆ ಮೂಲಕ ಹಿಡಿದು ಕಾಡಿಗೆ ಬಿಡಲಾಗಿದೆ.
ಹೆಬ್ಬಾವು ಇರುವುದನ್ನು ತಿಳಿದು ಹಲವರು ನೋಡಲು ಓಡಿಬಂದಿದ್ದರು. ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವು ಇದೆ ಮೊದ ಬಾರಿ ನೋಡುತ್ತಿದ್ದೆವೆ. ಹಾವು ಇರುವುದನ್ನು ಗಮನಿಸದೆ ಇದ್ದಲ್ಲಿ ಅಪಾಯ ಸಂಭವಿಸುವ ಆತಂಕವಿತ್ತು. ಅದೃಷ್ಟವಶಾತ್ ಯಾರಿಗೂ ಏನು ಮಾಡಿಲ್ಲ ಎಂದು ಮನೆಯ ಮಾಲೀಕ ಶೇಖರ ನಿಟ್ಟುಸಿರುಬಿಟ್ಟರು.

Conclusion:
Last Updated : Aug 2, 2019, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.