ಕಾರವಾರ: ಶಾಲೆಯಿಂದ ಮನೆಗೆ ತೆರಳುವ ಗಡಿಬಿಡಿಯಲ್ಲಿ ಶಾಲಾ ಕೊಠಡಿ ಒಳಗೆ ಹೊಕ್ಕಿದ್ದ ಹಸುವನ್ನು ಎರಡು ದಿನ ಶಿಕ್ಷಕರು ಕೂಡಿ ಹಾಕಿದ ವಿಚಿತ್ರ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.
ಗೋಕರ್ಣದ ತಾರನಮಕ್ಕಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದಿನ ಶಾಲೆ ಮುಗಿದ ಬಳಿಕ ಶಿಕ್ಷಕರು ಕೊಠಡಿ ಒಳಗೆ ನೋಡದೆ ಬಾಗಿಲು ಹಾಕಿಕೊಂಡು ತೆರಳಿದ್ದರು. ಆದರೆ ದನವೊಂದು ಕೊಠಡಿ ಒಳಗೆ ಸೇರಿಕೊಂಡಿತ್ತು. ಮಾರನೆ ದಿನ ಭಾನುವಾರವಾದ ಕಾರಣ ಆಗಲೂ ಗೊತ್ತಾಗಿರಲಿಲ್ಲ. ಆಹಾರ ನೀರಿಲ್ಲದೇ ಹಸಿವಿನಿಂದ ಹಸು ಗೀಳಿಟ್ಟಿದ್ದು ನಂತರ ಅಕ್ಕಪಕ್ಕದ ಜನರಿಗೆ ತಿಳಿದು ಕೊಠಡಿ ನೋಡಿದಾಗ ಹಸು ಇರುವುದು ಪತ್ತೆಯಾಯಿತು.
ನಂತರ ಹಸುಗೆ ಕೊಠಡಿಯಿಂದ ಮುಕ್ತಿ ನೀಡಲಾಗಿದ್ದು, ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.