ಶಿರಸಿ: ನಗರದಲ್ಲಿ ಕಳೆದ ಮೂರು ದಿನಗಳಿಂದ 14 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇಂದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ತಾಲೂಕಿನ ಬಾಳಗಾರಿನ 42 ವರ್ಷದ ವ್ಯಕ್ತಿ ಬೆಂಗಳೂರಿನಿಂದ ವಾಪಸಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಬೆಳಿಗ್ಗೆ ಈತನಿಗೆ ಕೊವಿಡ್ ದೃಢಪಟ್ಟಿತ್ತು. ಬಳಿಕ ಬೆಳಿಗ್ಗೆ 7.30ಕ್ಕೆ ಕಾರವಾರಕ್ಕೆ ವರ್ಗಾಯಿಸಲಾಯಿತು. ಚಿಕಿತ್ಸೆ ಫಲಿಸದೇ ಮಧ್ಯಾಹ್ನ 3.30ರ ವೇಳೆಗೆ ಮೃತಪಟ್ಟಿದ್ದಾನೆ. ಈ ಮೂಲಕ ಶಿರಸಿಯಲ್ಲಿ ಮೊದಲ ಸಾವು ದಾಖಲಾಗಿದೆ.