ETV Bharat / state

ಉತ್ತರ ಕನ್ನಡದಲ್ಲಿ 6 ಜನರಲ್ಲಿ ಕೊರೊನಾ ಪತ್ತೆ: 93 ಮಂದಿ ಗುಣಮುಖ - ಉತ್ತರ ಕನ್ನಡ ಲೆಟೆಸ್ಟ್ ನ್ಯೂಸ್

ಯಲ್ಲಾಪುರದಲ್ಲಿ ಮೂರು, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರದಲ್ಲಿ ತಲಾ‌ ಒಂದು ಪ್ರಕರಣ ಸೇರಿ ಜಿಲ್ಲೆಯಲ್ಲಿಂದು 6 ಜನರಲ್ಲಿ ಸೋಂಕು ಪತ್ತೆಯಾಗಿದೆ. 93 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಉಳಿದ 27 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Corona case of uttarakannada
Corona case of uttarakannada
author img

By

Published : Jun 16, 2020, 5:25 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.

ಯಲ್ಲಾಪುರದಲ್ಲಿ ಮೂರು, ಭಟ್ಕಳ, ಮುಂಡಗೋಡ ಹಾಗೂ ಹೊನ್ನಾವರದಲ್ಲಿ ತಲಾ‌ ಒಂದು ಪ್ರಕರಣ ಸೇರಿ ಇಂದು ಜಿಲ್ಲೆಯಲ್ಲಿ 6 ಜನರಲ್ಲಿ ಸೋಂಕು ಪತ್ತೆಯಾಗಿದೆ. ಯಲ್ಲಾಪುರದಲ್ಲಿ ಓರ್ವ ಮಹಿಳೆ ಮುಂಬೈನಿಂದ ತಿಂಗಳ ಹಿಂದಷ್ಟೇ ವಾಪಸಾಗಿದ್ದು, ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಮುಂಡಗೋಡದ ಸೋಂಕಿತರು ದೆಹಲಿಯಿಂದ ಟಿಬೇಟಿಯನ್ ಕಾಲೋನಿಗೆ ವಾಪಸಾದವರಾಗಿದ್ದು, ಉಳಿದೆವರೆಲ್ಲರೂ ಮುಂಬೈನಿಂದ ವಾಪಸಾದವರಾಗಿದ್ದಾರೆ.

ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದ್ದು, 93 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 27 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.