ETV Bharat / state

ಶಿರಸಿಯಲ್ಲಿ 26 ಟನ್ ಅಕ್ಕಿ ಸಮೇತ ಆರೋಪಿ ಬಂಧನ

author img

By

Published : Jul 18, 2021, 10:41 PM IST

ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಶಿರಸಿ ತಾಲೂಕಿನ ಚಿಪಗಿ ಸರ್ಕಲ್ ಬಳಿ ಪೊಲೀಸರು ಬಂಧಿಸಿದ್ದಾರೆ.

26-tonnes-of-illegal-rice-seized-in-shirasi
ಶಿರಸಿಯಲ್ಲಿ 26 ಟನ್ ಅಕ್ಕಿ ಸಮೇತ ಆರೋಪಿ ಬಂಧನ

ಶಿರಸಿ: ತಾಲೂಕಿನ ಚಿಪಗಿ ಸರ್ಕಲ್ ಬಳಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ನಂತರ ಆತನಿಂದ 26 ಟನ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಲಾರಿ ಚಾಲಕ ಸಂಗಪ್ಪ ಅಸೂಟಿ ಬಂಧಿತ ಆರೋಪಿ. ಈತ ಕಂಟೇನರ್ ಮೂಲಕ (ಕೆಎ-19 ಎಬಿ-6689) ಹಾವೇರಿಯಿಂದ‌ ಮಂಗಳೂರಿಗೆ 5,85,000 ಮೌಲ್ಯದ 26 ಟನ್ ಅಕ್ಕಿಯನ್ನು ಸಾಗಿಸುತ್ತಿದ್ದ.

ಹಾವೇರಿ ಜಿಲ್ಲೆಯ ಸಚಿನ ಕಬ್ಬೂರ ಎಂಬ ಪಡಿತರ ಚೀಟಿದಾರರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಂಗ್ರಹಿಸಿಕೊಂಡಿದ್ದಾನೆ. ನಂತರ ಮಂಗಳೂರಿನ ಗಣೇಶ ಕಂಪನಿಯ ಮ್ಯಾನೇಜರ್​ ಬ್ರಿಜೇಶ ಶೆಟ್ಟಿಯಿಂದ ಕಂಟೇನರ್ ತರಿಸಿಕೊಂಡಿದ್ದಾನೆ. ತದನಂತರ ಚಾಲಕನ ಜೊತೆಗೂಡಿ ಹಾವೇರಿಯಿಂದ ಮಂಗಳೂರು ಕಡೆಗೆ ಅಕ್ಕಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.

ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲು ಬಳಸಿದ 6,00.000 ರೂಪಾಯಿ ಮೌಲ್ಯದ ಕಂಟೇನರ್​ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಾಳೆ ಸಿದ್ದರಾಮಯ್ಯ, ಡಿಕೆಶಿ ದಿಲ್ಲಿಗೆ ; ವಿವಿಧ ಸಮಿತಿಗೆ ಸಮನ್ವಯದ ಪದಾಧಿಕಾರಿಗಳ ನೇಮಕಕ್ಕೆ ಅಸ್ತು!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.