ಭಟ್ಕಳ: ತಾಲೂಕಿನಲ್ಲಿ ಮೂರ್ನಾಲ್ಕು ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂದು 19 ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಭಟ್ಕಳದ ಗ್ರಾಮೀಣ ಭಾಗಕ್ಕೂ ಕೊರೊನಾ ಎಂಟ್ರಿ ಕೊಟ್ಟಿದೆ.
ತಾಲೂಕಿನಲ್ಲಿಂದು 38, 42, 49 ವರ್ಷದ ಪುರುಷರು, 32, 42, 50 ವರ್ಷದ ಮಹಿಳೆಯರು, 18, 20, 24, 28 ವರ್ಷದ ಯುವಕರು, 17, 21, 23 ವರ್ಷದ ಯುವತಿಯರು, 7, 8, 9, 12 ವರ್ಷದ ಬಾಲಕರು, 8 ವರ್ಷದ ಬಾಲಕಿ ಸೇರಿದಂತೆ 65 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ತಾಲೂಕಿನ ಗ್ರಾಮೀಣ ಭಾಗದ ಮಾರುಕೇರಿಯ 20 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಗ್ರಾಮೀಣ ಭಾಗದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.