ಭಟ್ಕಳ: ಶಾಲೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಬಾಲಕಿ ಕಾಣೆಯಾದ ಪ್ರಕರಣ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ.
ರಕ್ಷಿತಾ ಲಕ್ಷಣ ನಾಯ್ಕ (15) ನಾಪತ್ತೆಯಾದ ಬಾಲಕಿ. ಈಕೆ ಏಪ್ರಿಲ್ 8 ಗುರುವಾರ ಬೆಳಿಗ್ಗೆ ಸೋನಾರಕೇರಿ ಶಾಲೆಗೆ ಹೋಗಿ ಬರುವುದಾಗಿ ಹೇಳಿದ್ದಾಳೆ. ಸಂಜೆಯಾದ್ರೂ ಮನೆಗೆ ಬಾರದೆ ಇರುವುದರಿಂದ ಆತಂಕಗೊಂಡ ಪೋಷಕರು ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅಲ್ಲಿಯೂ ಮಗಳ ಸುಳಿವು ಸಿಗಲಿಲ್ಲ.
ಮಗಳನ್ನು ಹುಡುಕಿ ಕೊಡುವಂತೆ ಬಾಲಕಿಯ ತಂದೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮೀಣ ಠಾಣೆ ಪಿ ಎಸ್.ಐ ಭರತ್ ತನಿಖೆ ಕೈಕೊಂಡಿದ್ದಾರೆ.