ಭಟ್ಕಳ: ತಾಲೂಕಿನಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಕೂಡಾ 11 ಪ್ರಕರಣಗಳು ಪತ್ತೆಯಾಗಿವೆ.
P-12047ರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಲೂಕಿನ ಸಾಗರ ರಸ್ತೆಯ ಖಾಸಗಿ ಆಸ್ಪತ್ರೆಯ ನರ್ಸ್ಗೆ ಸೋಂಕು ತಗಲಿದ್ದು, ತಾಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಮುರುಡೇಶ್ವರ ನಿವಾಸಿಯಾದ 70 ವರ್ಷದ ವೃದ್ಧ ಮತ್ತು 51 ವರ್ಷದ ಮಹಿಳೆ, ನಾಗಪ್ಪ ನಾಯ್ಕ ರಸ್ತೆಯ 7 ಮತ್ತು 14 ವರ್ಷದ ಬಾಲಕಿಯರು, ಅಲ್ವಾ ಸ್ಟ್ರೀಟ್ನ 52 ವರ್ಷದ ಮಹಿಳೆ, ಅಜಾಜ್ ನಗರ ಜಾಲಿಯ 31 ವರ್ಷದ ಪುರುಷ, ಕೊಕ್ತಿನಗರದ 41 ವರ್ಷದ ಮಹಿಳೆ, ಅಜಾದ್ ನಗರದ 56 ವರ್ಷದ ಮಹಿಳೆ, ಅಸಿಯಾನ್ ಕಿದ್ವಾಯ್ ರೋಡ್ನ 39 ವರ್ಷದ ಪುರುಷ, ಮುಗ್ದಮ್ ಕಾಲೋನಿಯ 30 ವರ್ಷದ ಮಹಿಳೆ, 41 ವರ್ಷದ ನರ್ಸ್ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಖಾಸಗಿ ಆಸ್ಪತ್ರೆಯ 41 ವರ್ಷದ ನರ್ಸ್ಗೆ P-12047 ಸೋಂಕಿತನ ಸಂಪರ್ಕದಿಂದ ಸೋಂಕು ತಗಲಿದ್ದು, ತಾಲೂಕಿನ ಜನತೆಗೆ ಆತಂಕ ತಂದೊಡ್ಡಿದೆ.