ETV Bharat / state

ಸಾರ್ವಜನಿಕರಿಗೆ ಕಿರಿಕಿರಿ ಮಾಡ್ತಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದ ಪೊಲೀಸರು!

ಹಾರನ್​, ಹೆಡ್​ಲೈಟ್​​, ಸೈಲೆನ್ಸರ್​​ ಬದಲಾಯಿಸಿಕೊಂಡು ದೊಡ್ಡ ಮಟ್ಟದಲ್ಲಿ ಶಬ್ದ ಮಾಡ್ತಿದ್ದ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

10 bike seized by Sirsi police
10 bike seized by Sirsi police
author img

By

Published : Sep 17, 2020, 1:45 AM IST

ಶಿರಸಿ : ನಗರದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಡ್​​ಲೈಟ್​, ಹಾರನ್ ಮತ್ತು ಸೈಲೆನ್ಸರ್​ಗಳನ್ನು ಬದಲಾಯಿಸಿಕೊಂಡು, ಚಾಲನೆ ವೇಳೆ ಹೆಚ್ಚಿನ ಶಬ್ದ ಉಂಟು ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ 10ಕ್ಕೂ ಹೆಚ್ಚು ವಾಹನಗಳನ್ನು ಶಿರಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿಎಸ್ಪಿ ಗೋಪಾಲಕೃಷ್ಣ ನಾಯಕ ಮತ್ತು ಸಿಪಿಐ ಪ್ರದೀಪ್ ಬಿಯುರವರ ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆ ಪಿಎಸ್​ಐ ನಾಗಪ್ಪ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಯಾರಾದರೂ ದ್ವಿಚಕ್ರ ವಾಹನಗಳ ಲೈಟ್, ಹಾರನ್, ಸೈಲೆನ್ಸರ್​ನ ಭಾಗಗಳನ್ನು ಬದಲಾಯಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದಲ್ಲಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಶಿರಸಿ ವೃತ್ತ ನಿರೀಕ್ಷಕ ಬಿ.ಯು.ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.