ಉಡುಪಿ : ವಿಹಾರಕ್ಕೆ ಬಂದಿದ್ದ ಯುವತಿ ಸಮುದ್ರದಲ್ಲಿ ಕಣ್ಮರೆಯಾದ ಘಟನೆ ಜಿಲ್ಲೆಯ ಮಲ್ಪೆ ಬೀಚ್ನಲ್ಲಿ ನಡೆದಿದೆ. ದಶಮಿ (20) ಸಮುದ್ರದಲ್ಲಿ ಕಣ್ಮರೆಯಾದ ಯುವತಿಯಾಗಿದ್ದಾಳೆ. ಕೊಡಗು ಹಾಗೂ ಮೈಸೂರು ಜಿಲ್ಲೆಯಿಂದ ಬಂದಿದ್ದ ನಾಲ್ವರು ಗೆಳೆಯರ ತಂಡ ನೀರಿನಲ್ಲಿ ಆಟವಾಡುತ್ತಾ ಸಮುದ್ರದ ಆಳಕ್ಕೆ ಇಳಿದಿದ್ದಾರೆ.
ಅಲೆಗಳ ಅಬ್ಬರಕ್ಕೆ ಕೊಚ್ಚಿಹೋದ ಗೆಳೆಯರ ಪೈಕಿ ಮೂವರನ್ನ ಸ್ಥಳೀಯ ಈಜು ತಜ್ಞರು ರಕ್ಷಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಮುದ್ರಕ್ಕೆ ಇಳಿಯದಂತೆ ನೀಡಿದ್ದ ಮಲ್ಪೆ ಅಭಿವೃದ್ಧಿ ಸಮಿತಿ ಸೂಚನೆ ಧಿಕ್ಕರಿಸಿ ಈ ನಾಲ್ವರು ಸಮುದ್ರಕ್ಕೆ ಜಿಗಿದಿದ್ದರು.
ಓದಿ: COVID 3ನೇ ಅಲೆ ಭೀತಿ.. ನೇಮಕಗೊಂಡಿರುವ ಮೂರುವರೆ ಸಾವಿರ ವೈದ್ಯರಿಗೆ ತ್ವರಿತ ತರಬೇತಿ