ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಎಮರ್ಜೆನ್ಸಿ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯುತ್ತಿದ್ದ ಸೋಮವಾರ ಸಂತೆಯನ್ನು ಬಂದ್ ಮಾಡಲಾಗಿದೆ.
ಬೆಳಗ್ಗೆ ಸಂತೆ ಮಾರುಕಟ್ಟೆಗೆ ಆಗಮಿಸಿದ್ದ ವ್ಯಾಪಾರಸ್ಥರನ್ನು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಅವರು ಸಿಬ್ಬಂದಿ ಸಮೇತ ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುವ ಮೂಲಕ ಸಂತೆಯನ್ನು ತೆರವು ಮಾಡಿಸಿದ್ದಾರೆ. ಈ ದಿನ ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಮನವರಿಕೆ ಮಾಡಿಸಿ ಸಂತೆಗೆ ಬಂದವರನ್ನು ವಾಪಸ್ ಕಳುಹಿಸಿದ್ದಾರೆ.