ETV Bharat / state

ಚಿಕ್ಕಮಗಳೂರು: ಮತ ಎಣಿಕೆ ಕಾರ್ಯಕ್ಕೆ ಟೈಟ್​ ಸೆಕ್ಯುರಿಟಿ

author img

By

Published : May 22, 2019, 10:34 AM IST

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆ ಕೈಗೊಂಡಿದೆ.

ಜಿಲ್ಲಾಧಿಕಾರಿ

ಉಡುಪಿ: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ಸಂತ ಸಿಸಿಲೀಸ್ ಶಾಲೆಯಲ್ಲಿ ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯ ಅನ್ವಯ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ನಡೆದಿದೆ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮತ ಎಣಿಕೆಯನ್ನು ಒಟ್ಟು 14 ಕೊಠಡಿಗಳಲ್ಲಿ ನಡೆಸಲು ತಯಾರಿ ಮಾಡಿ ಕೊಳ್ಳಲಾಗಿದೆ. ಒಟ್ಟು ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗಾಗಿ 127 ಮಂದಿ ಮೇಲ್ವಿಚಾರಕರು, 131 ಮಂದಿ ಮತ ಎಣಿಕೆ ಸಹಾಯಕರು, 127 ಮಂದಿ ಮೈಕ್ರೋ ಅಬ್ಸರ್ವರ್, 127 ಡಿ ದರ್ಜೆಯ ನೌಕರರನ್ನು ನಿಯೋಜಿಸಲಾಗಿದೆ. ನಾಳೆ ಬೆಳಗ್ಗೆ 6 ರಿಂದ ಮೇ.25 ಬೆಳಗ್ಗೆ ಆರು ಗಂಟೆಯವರೆಗೆ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.

ಬಳಿಕ ಎಸ್ಪಿ ಅವರು ಮಾತನಾಡಿ ಮತ ಎಣಿಕೆ ನಡೆಯುವ ಶಾಲೆಯ ಸುತ್ತ ಮುತ್ತ ಪೊಲೀಸ್​ ಗಾರ್ಡ್​ಗಳನ್ನು ನಿಯೋಜನೆ ಮಾಡಲಾಗುತ್ತದೆ. ಪೋಲಿಂಗ್​ ಏಜೆನ್ಸಿ ಅವರಿಗೆ, ಮಾಧ್ಯಮದವರಿಗೆ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಈ ಮೂವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ. ಇವರಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಪಾಸ್​ ವ್ಯವಸ್ಥೆ ಮಾಡಲಾಗಿದೆ. ಪಾಸ್​ ಪಡೆದವರಿಗೆ ಮಾತ್ರ ಪ್ರವೇಶ ಇರುತ್ತದೆ. 130 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 3 ಡಿಎಸ್​ಪಿಗಳು, 6 ಇನ್​ಸ್ಪೆಕ್ಟರ್​ಗಳು, 23 ಪಿಎಸ್​ಐ, 280 ಕಾನ್​ಸ್ಟೇಬಲ್ಸ್​ಗಳು ಸೇರಿದಂತೆ 83 ಹೋಮ್​ ಗಾರ್ಡ್​ಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.