ಉಡುಪಿ: ದಾಖಲೆಗಳ ಸಹಿತ ಸಾಬೀತು ಪಡಿಸಿ. ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ ಎಂದು ದಿಂಗಾಲೇಶ್ವರ ಶ್ರೀಗಳ ಮಠಗಳ ಅನುದಾನಕ್ಕೆ 30 ಪರ್ಸೆಂಟ್ ಕಮಿಷನ್ ಆರೋಪಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಅನಗತ್ಯವಾಗಿ ಮಠ ಮಾನ್ಯಗಳಿಂದಲೂ ಕಮಿಷನ್ ಆರೋಪ ಮಾಡಬೇಡಿ. ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ ಅಪ್ಪಟ ಸುಳ್ಳು. ಈ ಬಗ್ಗೆ ನಾನು ಖಡಾಖಂಡಿತವಾಗಿ ಹೇಳುತ್ತೇನೆ. ನಮ್ಮ ಮಠಕ್ಕೂ 50 ಲಕ್ಷ ರೂಪಾಯಿ ಬಂದಿದೆ. ನಾವ್ಯಾರು ಒಂದು ನಯಾಪೈಸೆ ಕಮಿಷನ್ ನೀಡಿಲ್ಲ. ನಾವು ಯಾವುದೇ ಹಂತದಲ್ಲಿ ಸರ್ಕಾರದ ಅಧಿಕಾರಿಗಳಿಗೆ ಕಮಿಷನ್ ಕೊಟ್ಟಿಲ್ಲ. ಇಂತಹ ಸುಳ್ಳು ಸಂದೇಶ ಹಬ್ಬಿಸಬಾರದು ಎಂದರು.
ಎಲ್ಲೋ ಆದ ಇಂದು ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ. ನನಗೆ ಗೊತ್ತಿರುವ ಪ್ರಕಾರ ಯಾವುದೇ ಶ್ರೀಗಳು ಕಮಿಷನ್ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ. ದಾಖಲೆ ಕೊಡಿ ಎಂದು ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.