ಉಡುಪಿ: ಕಾಪು ತಾಲೂಕು ಆಗಿ ಪರಿವರ್ತನೆಗೊಂಡ ನಂತರ ಅಭಿವೃದ್ಧಿಯು ವೇಗ ಪಡೆದುಕೊಂಡಿದೆ. ಆದರೆ, ಈ ಮಧ್ಯೆ ಬೀದಿ ದೀಪದ ಸೌಲಭ್ಯವಿಲ್ಲದ ಕಾರಣ ಇಲ್ಲಿನ ಜನ ಕತ್ತಲಲ್ಲಿ ಓಡಾಡುವ ಅನಿವಾರ್ಯತೆ ಎದುರಾಗಿದೆ.
ಪ್ರವಾಸೋದ್ಯಮ, ರಸ್ತೆ ಅಭಿವೃದ್ಧಿ, ಕೆರೆ ಅಭಿವೃದ್ಧಿ ಕಾಮಗಾರಿಗಳು ಉತ್ತಮ ವೇಗದಲ್ಲಿ ನಡೆಯುತ್ತಿದೆ. ಹೀಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಪುವಿನಲ್ಲಿ ಸೂಕ್ತ ಬೀದಿ ದೀಪ ಸೌಲಭ್ಯವಿಲ್ಲದ ಹಿನ್ನೆಲೆ ಜನತೆ ಕತ್ತಲಲ್ಲಿ ಓಡಾಟ ಮಾಡಬೇಕಾದ ಅನಿವಾರ್ಯತೆ ಇದೆ.
ಕಾಪು ವೃತ್ತ ನಿರೀಕ್ಷಕರ ಕಚೇರಿಯಿಂದ ಕಾಪು ಪೇಟೆವರೆಗೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ, ಪುರಸಭೆ ಇನ್ನೂ ಕೂಡ ಅದನ್ನು ಸರಿ ಮಾಡಿಲ್ಲ. ಹೀಗಾಗಿ ರಾತ್ರಿ ವೇಳೆ ಈ ರಸ್ತೆ ಮೂಲಕ ಓಡಾಡುವ ಜನಗಳಿಗೆ ಇದರಿಂದ ಸಮಸ್ಯೆಯಾಗಿದೆ. ಈ ಕುರಿತು ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಕಾಪು ಜನತೆಯ ಆಗ್ರಹವಾಗಿದೆ.