ಉಡುಪಿ: ಸ್ವಚ್ಛ ನಗರಿ ಎಂದೇ ಹೆಸರುವಾಸಿಯಾಗಿರುವ ಉಡುಪಿಗೆ ಜನರೇ ಸ್ವಚ್ಚತೆಯನ್ನು ಮರೆತು ಕಳಂಕ ತರುವ ಕೆಲಸ ಮಾಡಿದ್ದಾರೆ.
ಹೊಸ ವರ್ಷಾಚರಣೆಯ ಹಿನ್ನೆಲೆ ಮೋಜು-ಮಸ್ತಿ ಜೊತೆ ಗುಂಡು ಪಾರ್ಟಿ ನಡೆಸಿರುವ ಕೆಲವರು ಕುಡಿದ ಬೀಯರ್ ಬಾಟಲಿ, ಕುಡಿಯುವ ನೀರಿನ ಬಾಟಲಿ ಹಾಗೂ ಕಸವನ್ನ ರಸ್ತೆಯಲ್ಲಿ ಎಸೆದು ಹೋಗಿದ್ದು ನಗರ ಭಾಗದಲ್ಲೇ ಇಂತಹ ಸನ್ನಿವೇಶ ಹೆಚ್ಚಾಗಿ ಕಂಡು ಬರುತ್ತಿದೆ.
ಉಡುಪಿಯ ಬೀಡಿನಗುಡ್ಡೆಯ ಬಳಿ ರಸ್ತೆ ಬದಿಯಲ್ಲೇ ಸಾಕಷ್ಟು ಬಿಯರ್ ಬಾಟಲಿಗಳು ಕಾಣಸಿಕ್ಕಿದ್ದು, ಸ್ವಚ್ಛ ನಗರಿಗೆ ಕಳಂಕ ತರುವಂತಿದೆ. ಪೌರ ಕಾರ್ಮಿಕರ ಶ್ರಮದಿಂದ ಉಡುಪಿ ಸ್ವಚ್ಛವಾಗಿರಲು ಸಾಧ್ಯವಾಗಿದೆ. ಆದ್ರೆ ಸ್ವಚ್ಛತೆಯನ್ನ ಮರೆತ ಉಡುಪಿಯ ಮಂದಿ ಎಲ್ಲೆಂದರಲ್ಲಿ ಕಸವನ್ನು ಹಾಗೂ ಮದ್ಯದ ಬಾಟಲಿಗಳನ್ನು ಎಸೆದಿದ್ದು, ವಿದ್ಯಾವಂತರ ಜಿಲ್ಲೆಗೆ ಶೋಭೆ ತರುವಂತದ್ದಲ್ಲ ಎಂದು ರಸ್ತೆಹೋಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವರ್ಷದ ಮೊದಲ ದಿನ ಚಿನ್ನ, ಬೆಳ್ಳಿ ಓಟಕ್ಕೆ ಬ್ರೇಕ್: ಇಂದಿನ ದರ ಹೀಗಿದೆ..