ETV Bharat / state

ಅಯೋಧ್ಯೆ ತೀರ್ಪಿಗೆ ದಿನಗಣನೆ: ದೇಶಕ್ಕೆ ಮುಖ್ಯ ಸಂದೇಶ ರವಾನಿಸಿದ ಪೇಜಾವರ ಶ್ರೀ - ಶಾಂತಿ ಕಾಪಾಡುವಂತೆ ಪೇಜಾವರ ಶ್ರೀ ಹೇಳಿಕೆ

ಅಯೋಧ್ಯೆ ವಿವಾದ ಕುರಿತ ತೀರ್ಪಿಗೆ ದಿನಗಣನೆ ಆರಂಭವಾಗಿರು ಹಿನ್ನೆಲೆಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ದೇಶ ಜನತೆಗೆ ಮುಖ್ಯ ಸಂದೇಶವೊಂದನ್ನು ನೀಡಿದ್ದಾರೆ. ತೀರ್ಪು ಏನೇ ಬಂದರೂ ಎಲ್ಲರೂ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ.

ವಿಶ್ವೇಶತೀರ್ಥ ಸ್ವಾಮೀಜಿ
author img

By

Published : Nov 7, 2019, 11:57 PM IST

ಉಡುಪಿ: ಅಯೋಧ್ಯೆ ತೀರ್ಪು ಹಿಂದೂಗಳ ಪರ ಬರುವ ನಿರೀಕ್ಷೆಯಿದೆ. ಆದ್ರೆ ಯಾರೂ ಕೂಡ ವಿಜಯೋತ್ಸವ ಮಾಡಬಾರದು. ತೀರ್ಪು ಹಿಂದೂಗಳ ಪರ ಬಂದರೆ ಮುಸ್ಲಿಂ ಸಮುದಾಯದ ಜೊತೆ ಶಾಂತಿಯಿಂದ ಇರಬೇಕು ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.

ವಿಶ್ವೇಶ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಮಠ

ವಿಶ್ವ ಹಿಂದೂ ಪರಿಷತ್ ಈ ಸಂಬಂಧ ನಿರ್ಣಯವೊಂದನ್ನು ತೆಗೆದುಕೊಂಡಿದೆ. ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಗೆ ಭಂಗ ಆಗದಂತೆ ನೋಡಿಕೊಳ್ಳಬೇಕೆಂಬುದೇ ನನ್ನ ಕಳಕಳಿಯಾಗಿದೆ. ಮುಖ್ಯವಾಗಿ ಕರಾವಳಿ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ಎಂಬುದು ನನ್ನ ಬಯಕೆ. ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು. ಏಕೆಂದರೆ ಮೆರವಣಿಗೆ, ವಿಜಯೋತ್ಸವದಿಂದ ಘರ್ಷಣೆಗೆ ಅವಕಾಶವಾಗುತ್ತದೆ ಎಂದು ಅವರು ನುಡಿದರು.

ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುವ ಎಚ್ಚರಿಕೆಯನ್ನೂ ಶ್ರೀಗಳು ನೀಡಿದ್ದಾರೆ. ತೀರ್ಪು ಏನೇ ಬಂದರೂ ಶಾಂತಿಭಂಗ ಸಲ್ಲದು. ಒಂದು ವೇಳೆ ಹಿಂದೂಗಳ ಪರ ತೀರ್ಪು ಬಂದರೆ ಯಾವಾಗ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದು ಹೇಳಿದರು.

ಇನ್ನು ಟಿಪ್ಪು ಸುಲ್ತಾನ್​ ವಿವಾದಿತ ವ್ಯಕ್ತಿ. ಕೊಡಗಿನಲ್ಲಿ ಟಿಪ್ಪುವಿನಿಂದ ಹತ್ಯಾಕಾಂಡ ಆಗಿದೆ. ವಿವಾದಿತರ ಜಯಂತಿ ಸರಿಯಲ್ಲ. ಟಿಪ್ಪು ಒಳ್ಳೆಯ ಕೆಲಸ ಕೂಡಾ ಮಾಡಿದ್ದಾನೆ. ಟಿಪ್ಪು ಹಲವು ಕೆಟ್ಟ ಕೆಲಸವನ್ನೂ ಮಾಡಿದ್ದಾನೆ. ಟಿಪ್ಪು ಬಗ್ಗೆ ಪಠ್ಯದಲ್ಲಿ ಸತ್ಯದ ವಿಚಾರ ಬರೆಯಬೇಕು. ಆತನಿಗೆ ಎರಡು ಮುಖವಿದೆ. ಇತಿಹಾಸದಲ್ಲಿ ಸತ್ಯಾಂಶ‌ ಬರೆಯಬೇಕು. ವಿವಾದಿತ ವ್ಯಕ್ತಿಯ ಕುರಿತ ವಿಚಾರ ಸತ್ಯ ನಿಷ್ಠುರವಾಗಿರಬೇಕು ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.

Intro:ಉಡುಪಿ
ಅಯೋಧ್ಯೆ ವಿಜಯೋತ್ಸವ ಬೇಡ
07_11_19

ಅಯೋಧ್ಯೆ ತೀರ್ಪಿಗೆ ದಿನಗಣನೆ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳು ಮುಖ್ಯ ಸಂದೇಶವೊಂದನ್ನು ನೀಡಿದ್ದಾರೆ.ಉಡುಪಿಯ ಪೇಜಾವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ,ತೀರ್ಪು ಹಿಂದೂಗಳ ಪರ ಬರುವ ನಿರೀಕ್ಷೆ ಇದೆ.ಆದರೆ ಯಾರೂ ಕೂಡ ವಿಜಯೋತ್ಸವ ಮಾಡಬಾರದು.ತೀರ್ಪು ಹಿಂದೂಗಳ ಪರ ಬಂದರೆ ಮುಸ್ಲಿಂ ಸಮುದಾಯದ ಜೊತೆ ಶಾಂತಿಯಿಂದ ಇರಬೇಕು ಎಂದಿದ್ದಾರೆ.ವಿಶ್ವ ಹಿಂದೂ ಪರಿಷತ್ ಈ ಸಂಬಂಧ ನಿರ್ಣಯವೊಂದನ್ನು ತೆಗೆದುಕೊಂಡಿದೆ.ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಭಂಗ ಆಗಬಾರದು ಎಂಬುದೇ ನನ್ನ ಕಳಕಳಿಯಾಗಿದೆ. ಮುಖ್ಯವಾಗಿ ಕರಾವಳಿಯಲ್ಲಿ ,ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ಎಂಬುದು ನನ್ನ ಬಯಕೆ.ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು.ಯಾಕೆಂದರೆ ಮೆರವಣಿಗೆ ,ವಿಜಯೋತ್ಸವದಿಂದ ಘರ್ಷಣೆಗೆ ಅವಕಾಶವಾಗುತ್ತದೆ ಎಂದು ಮನವಿ ಮಾಡಿದರು.
ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುವ ಎಚ್ಚರಿಕೆ ನೀಡಿದ ಶ್ರೀಗಳು ,ಯಾರ ಪರ ಬಂದರೂ ಶಾಂತಿಭಂಗ ಸಲ್ಲದು ಎಂದರು.
ಒಂದು ವೇಳೆ ಹಿಂದೂಗಳ ಪರ ತೀರ್ಪು ಬಂದರೆ ರಾಮಮಂದಿರ ನಿರ್ಮಾಣ ಆಗಲಿದೆ ಎಂದ ಪೇಜಾವರ ಶ್ರೀಗಳು ,ತೀರ್ಪು ಬಂದ ಬಳಿಕ ,ಯಾವಾಗ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದರು.

ಟಿಪ್ಪು ಸುಲ್ತಾನ ವಿವಾದಿತ ವ್ಯಕ್ತಿ.
ಕೊಡಗಿನಲ್ಲಿ ಟಿಪ್ಪುವಿನಿಂದ ಹತ್ಯಾಕಾಂಡ ಆಗಿದೆ.
ವಿವಾದಿತರ ಬಗ್ಗೆ ಜಯಂತಿ ಸರಿಯಲ್ಲ.ಟಿಪ್ಪು ಒಳ್ಳೆಯ ಕೆಲಸ ಕೂಡಾ ಮಾಡಿದ್ದಾನೆ.ಟಿಪ್ಪು ಹಲವು ಕೆಟ್ಟ ಕೆಲಸವನ್ನೂ ಮಾಡಿದ್ದಾನೆ ಅಂತಾ ಪೇಜಾವರ ಶ್ರೀಗಳು ಹೇಳಿದ್ದಾರೆ.

ಟಿಪ್ಪು ಬಗ್ಗೆ ಪಠ್ಯದಲ್ಲಿ ಸತ್ಯದ ವಿಚಾರ ಬರೆಯಬೇಕು.ಟಿಪ್ಪು ಸುಲ್ತಾನನಿಗೆ ಎರಡು ಮುಖವಿದೆ.ಇತಿಹಾಸದಲ್ಲಿ ಸತ್ಯಾಂಶ‌ ಬರೆಯಬೇಕು.
ವಿವಾದಿತ ವ್ಯಕ್ತಿಯ ವಿಚಾರ ಸತ್ಯ ನಿಷ್ಠುರವಾಗಿರಬೇಕು ಉಡುಪಿಯಲ್ಲಿ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.Body:PejavaraConclusion:Pejavara
ETV Bharat Logo

Copyright © 2025 Ushodaya Enterprises Pvt. Ltd., All Rights Reserved.