ETV Bharat / state

ಶಿರ್ವದಲ್ಲೊಬ್ಬ ಜೂನಿಯರ್​ ಕಾಂತಾರ ರಿಷಭ್ ಶೆಟ್ಟಿ.. ಸೆಲ್ಫಿಗಾಗಿ ಮುಗಿಬಿದ್ದ ಜನರು - ಈಟಿವಿ ಭಾರತ ಕನ್ನಡ

ಕಾಂತಾರ ಸಿನೆಮಾದ ಶಿವನನ್ನು ಹೋಲುವ ವ್ಯಕ್ತಿಯೊಬ್ಬರು ಶಿರ್ವದಲ್ಲಿದ್ದಾರೆ. ಕಾಣಲು ರಿಷಭ್​ ಶೆಟ್ಟಿಯಂತೆ ಕಂಡರೂ ಇವರು ಅವರಲ್ಲ. ಇವರ ಅಂಗಡಿಗೆ ಬಂದವರು ಅಯ್ಯೋ‌ ನೀವು ರಿಷಬ್​​ ಶೆಟ್ಟಿ ಥರಾನೇ ಇದ್ದೀರಿ ಎಂದು ಹೇಳಿದರಂತೆ.

Etv udupi-man-looks-as-same-as-rishab-shetty-of-kanthara
ಶಿರ್ವದಲ್ಲೋರ್ವ ಜೂನಿಯರ್​ ಕಾಂತಾರ ರಿಷಭ್ ಶೆಟ್ಟಿ... ಸೆಲ್ಫಿಗಾಗಿ ಮುಗಿಬಿದ್ದ ಜನರು
author img

By

Published : Nov 24, 2022, 8:55 PM IST

Updated : Nov 24, 2022, 11:04 PM IST

ಉಡುಪಿ : ಕಾಂತಾರ ಚಿತ್ರ ವಿಶ್ವದಾದ್ಯಂತ ಪ್ರದರ್ಶನ ಕಂಡು ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಸಿನೆಮಾ ಬಿಡುಗಡೆಯಾಗಿ 50 ದಿನ ಪೂರೈಸಿ ಅತಿ ಹೆಚ್ಚು ಗಳಿಕೆ ಮಾಡಿದ್ದು, ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡದ ಎರಡನೇ ಸಿನೆಮಾ ಎಂಬ ಖ್ಯಾತಿಗೆ ಭಾಜನವಾಗಿದೆ. ಈ ಮೂಲಕ ನಟ ಮತ್ತು ನಿರ್ದೇಶಕ ರಿಷಬ್​​​​​ ಶೆಟ್ಟಿ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರ ಹೊಮ್ಮಿದ್ದಾರೆ.

ರಿಷಭ್ ಶೆಟ್ಟಿಯವರನ್ನೇ ಹೋಲುವ ವ್ಯಕ್ತಿಯೊಬ್ಬರು ಉಡುಪಿಯಲ್ಲಿ ಇದ್ದಾರೆ. ಒಂದು ಕ್ಷಣ ನೀವು ನೋಡುವಾಗ ಕಾಂತಾರ ಸಿನೆಮಾದ ಶಿವನಂತೆಯೇ ಕಂಡರೂ ಇವರು ಅವರಲ್ಲ.

ಶಿರ್ವದಲ್ಲೊಬ್ಬ ಜೂನಿಯರ್​ ಕಾಂತಾರ ರಿಷಭ್ ಶೆಟ್ಟಿ.. ಸೆಲ್ಫಿಗಾಗಿ ಮುಗಿಬಿದ್ದ ಜನರು

ನೋಡಲು ರಿಷಭ್​ ಶೆಟ್ಟಿಯಂತೆಯೇ ಕಾಣುವ ಪ್ರದೀಪ್​ : ಇವರ ಹೆಸರು ಪ್ರದೀಪ್ ಆಚಾರ್ಯ. ಉಡುಪಿಯ ಶಿರ್ವದ ನಿವಾಸಿ. ಮೊಬೈಲ್​ ಶಾಪ್​ವೊಂದರಲ್ಲಿ ಕೆಲಸ ಮಾಡುತ್ತಿರುವ ಇವರು, ಕಾಂತಾರ ಸಿನೆಮಾ ಯಶಸ್ಸಿನ ಬಳಿಕ ಮುನ್ನಲೆಗೆ ಬಂದಿದ್ದಾರೆ. ಇನ್ನು ಇವರ ಅಂಗಡಿಗೆ ಬಂದವರು ಅಯ್ಯೋ‌ ನೀವು ರಿಷಬ್​​ ಶೆಟ್ಟಿ ಥರಾನೇ ಇದ್ದೀರಿ ಎಂದು ಹೇಳಿದ್ರಂತೆ.

ಆಮೇಲೆ ಪ್ರದೀಪ್​ ಅವರು ಅದೇ ರೀತಿ ಬಿಳಿ ಪಂಚೆ, ಅರ್ಧ ತೋಳಿನ ಶರ್ಟ್ ಹಾಕಿಕೊಳ್ಳಲು ಪ್ರಾರಂಭಿಸಿದರು. ಇದೀಗ ಇವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿ ಬೀಳ್ತಾ ಇದ್ದಾರೆ. ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಪ್ರದೀಪ್​ ಆಚಾರ್ಯ, ರಿಷಭ್ ಶೆಟ್ಟಿಯವರನ್ನೊಮ್ಮೆ ಭೇಟಿ ಮಾಡಿ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವಿಶ್ವದಾದ್ಯಂತ ಕಾಂತಾರ ಅಬ್ಬರ.. 400 ಕೋಟಿ ರೂ.​ ದಾಟಿದ ರಿಷಬ್​ ಶೆಟ್ಟಿ ಸಿನಿಮಾ!

Last Updated : Nov 24, 2022, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.