ETV Bharat / state

ಉಡುಪಿಯಲ್ಲಿ ಬಿಜೆಪಿ ಮುಖಂಡನ ಮೇಲೆ ತಲವಾರಿನಿಂದ ಹಲ್ಲೆ ಯತ್ನ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕದಲ್ಲಿ ಪರಿಚಯಸ್ಥರೇ ಬಿಜೆಪಿ ಮುಖಂಡನೋರ್ವನ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

Two people are Attempted assault on BJP Leader in Udupi
ಬಿಜೆಪಿ ಮುಖಂಡನ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನ
author img

By

Published : Jul 9, 2021, 8:25 PM IST

ಉಡುಪಿ: ಬಿಜೆಪಿ ಮುಖಂಡರೊಬ್ಬರ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕಾಪು ತಾಲೂಕಿನ ಬಂಟಕದಲ್ಲಿ ನಡೆದಿದೆ. ಬಂಟಕದಲ್ಲಿರುವ ಬೇಕರಿಯೊಂದರ ಮಾಲೀಕರಾದ ಗಣೇಶ್ ಶೆಟ್ಟಿ ಹಲ್ಲೆಗೊಳಗಾದವರು.

ಬಿಜೆಪಿ ಮುಖಂಡನ ಮೇಲೆ ತಲವಾರಿನಿಂದ ಹಲ್ಲೆಗೆ ಯತ್ನ

ನಿನ್ನೆರಾತ್ರಿ ಶೆಟ್ಟಿಯವರು ಬೇಕರಿ ಮುಚ್ಚಿ ಮನೆಗೆ ಹೊರಡುತ್ತಿದ್ದರು. ಈ ವೇಳೆ ಗುರುತು ಪರಿಚಯಸ್ಥರಾದ ಸ್ಟೀಫನ್ ಮೆಂಡೋನ್ಸಾ ಮತ್ತು ಚರಣ್​​​ ಶೆಟ್ಟಿ ಎಂಬುವವರು ಬೈಕ್​ನಲ್ಲಿ ಬಂದು ಶೆಟ್ಟಿಯವರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ವಿಪರೀತ ಮದ್ಯಪಾನ ಮಾಡಿದ್ದ ಅವರು, ಏಕಾಏಕಿಯಾಗಿ ಗಣೇಶ್​​​ರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಕೈಯಿಂದ ತಲೆಗೆ, ಬೆನ್ನಿಗೆ ಹೊಡೆದಿದ್ದಾರೆ. ಇದರಿಂದ ಗಣೇಶ್ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಇಬ್ಬರೂ ಸೇರಿ ಬೈಕ್​​ನಲ್ಲಿದ್ದ ತಲವಾರಿನಿಂದ ಹೊಡೆಯಲು ಮುಂದಾಗಿದ್ದಾರೆ. ಇದರಿಂದ ಹೆದರಿದ ಗಣೇಶ್ ಬೊಬ್ಬೆ ಹೊಡೆದಾಗ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಇದನ್ನೂ ಓದಿ: ಜುಲೈ 11, 12 ರಂದು ಕರಾವಳಿ-ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ: ರೆಡ್ ಅಲರ್ಟ್ ಘೋಷಣೆ

ಗಣೇಶ್ ಮಜೂರು ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ವಿಶೇಷ ಚೇತನರಾಗಿದ್ದು, ಅವರು ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಸಂಬಂಧ ಶಿರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.