ಉಡುಪಿ: ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಬೈಕ್ ಕಳ್ಳರನ್ನು ಸಾರ್ವಜನಿಕರು ಹಿಡಿದು ಕೊಟ್ಟ ಘಟನೆ ಉಡುಪಿಯ ಹಳ್ಳಾಡಿಯಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಗುಡ್ಡೆಟ್ಟು ಬಳಿ ಕೆಲ ಯುವಕರು ಅನುಮಾನಾಸ್ಪದವಾಗಿ ಓಡಾಟ ಮಾಡುತ್ತಿದ್ದರು. ಸಾರ್ವಜನಿಕರು ಗುಂಪುಗೂಡಿ ಇವರು ಮಕ್ಕಳ ಕಳ್ಳರು ಇರಬಹುದು ಎಂದು ಸಂಶಯ ಬಂದು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ವಿಚಾರಣೆ ನಡೆಸಿದಾಗ ಅವರು ಮಕ್ಕಳ ಕಳ್ಳರಲ್ಲ, ಬೈಕ್ ಕದಿಯುವ ಖದೀಮರು ಅಂತ ಗೊತ್ತಾಗಿದೆ.
ರಾಕೇಶ್ ಮತ್ತು ಸುರೇಶ್ ಎಂಬುವರು ಮಂಗಳೂರಿನ ಉರ್ವದಲ್ಲಿ ಬೈಕ್ ಕದ್ದು ಕುಂದಾಪುರಕ್ಕೆ ಬಂದಿದ್ದರು. ಇಲ್ಲಿ ವ್ಯವಹಾರ ಕುದುರಿಸಿರುವುದನ್ನು ಕಂಡು ಸ್ಥಳೀಯರಿಗೆ ಅನುಮಾನ ಬಂದಿದೆ. ಘಟನೆ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಯುವಕರ ಜೊತೆ ಇನ್ನಿಬ್ಬರು ಇದ್ದರು ಎಂಬ ಸಾರ್ವಜನಿಕರ ಹೇಳಿಕೆಯ ಮೇಲೆ ತಲೆಮರೆಸಿಕೊಂಡವರಿಗಾಗಿ ತಲಾಶ್ ನಡೆದಿದೆ.
ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ ಕೈ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್..