ಉಡುಪಿ: ಸ್ವಚ್ಛ ಉಡುಪಿ ಎಂದು ಬಿರುದು ಪಡೆದಿದ್ದ ಉಡುಪಿ ನಗರಸಭೆ ಇದೀಗ ತನ್ನ ಮಗ್ಗುಲಲ್ಲೇ ಕಸ ಇಟ್ಟುಕೊಂಡು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ.
ನಗರದ ಸ್ವಚ್ಛತೆ ಕಾಪಾಡಬೇಕಾದ ನಗರಸಭೆ ಅಧಿಕಾರಿಗಳೇ ಸ್ವಚ್ಛತೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಉಡುಪಿ ನಗರಸಭೆ ಕಟ್ಟಡದ ಜೊತೆಗೆ ಇರೋ ಕೇಂದ್ರ ಗ್ರಂಥಾಲಯದ ಪ್ರವೇಶ ದ್ವಾರದಲ್ಲೇ ಕಸದ ರಾಶಿ ಕಂಡುಬಂದಿದೆ. ಗ್ರಂಥಾಲಯ ಪ್ರವೇಶ ದ್ವಾರದ ಮೆಟ್ಟಿಲುಗಳ ಬದಿ ಹಾಗೂ ಕೆಳಬದಿಯಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹಗೊಂಡಿವೆ.
ಈ ರೀತಿಯ ಕಸದಿಂದಾಗಿ ಮಾರಕ ಸೊಳ್ಳೆಗಳ ಉತ್ಪತ್ತಿಯಾಗುವ ಭೀತಿ ಎದುರಾಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಗರಾಡಳಿತ ಕಚೇರಿಯದು. ಆದ್ರೆ ವಿಪರ್ಯಾಸ ಅಂದ್ರೆ ಇದೀಗ ನಗರಸಭೆ ತನ್ನ ಮಡಿಲಲ್ಲಿಯೇ ಕಸ ತ್ಯಾಜ್ಯವನ್ನು ರಾಶಿ ಹಾಕಿಕೊಂಡಿದ್ದು, ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಗಿದೆ.