ಉಡುಪಿ: ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ಮಲ್ಪೆ ಹೂಡೆ ಕಡಲತೀರದಲ್ಲಿ ಭಾನುವಾರ ನಡೆದಿದೆ. ಮಣಿಪಾಲ ಎಂಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಶ್ರೀಕರ್, ನಿಶಾಂತ್ ಹಾಗೂ ಷಣ್ಮುಖ ಎಂಬುವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ನಿಶಾಂತ್, ಷಣ್ಮುಖ ಎಂಬ ಇಬ್ಬರನ್ನು ಮೇಲಕ್ಕೆತ್ತಿದ ಸ್ಥಳೀಯರು ಚಿಕಿತ್ಸೆಗಾಗಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಬ್ಬರೂ ಕೂಡ ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಶ್ರೀಕರ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೋರ್ವ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಬುದ್ಧಿ ಹೇಳಿದ ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹೊಡೆದು ಹತ್ಯೆ: ಬೆಂಗಳೂರಲ್ಲಿ ಮಗ ಅರೆಸ್ಟ್