ETV Bharat / state

ಸುಳ್ಳು ದಾಖಲೆ ನೀಡಿ 3 ಮದುವೆ: 2ನೇ ಹೆಂಡತಿ ಮಗಳ ಮದುವೆಯಲ್ಲಿ ಪೊಲೀಸರ ಅತಿಥಿ

ಸುಳ್ಳು ದಾಖಲೆ ಪತ್ರ ನೀಡಿ, ಮೂರು ಮದುವೆಯಾಗಿ ವಂಚಿಸಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಆತನ ಎರಡನೇ ಹೆಂಡತಿಯ ಮಗಳ ಮದುವೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ
ಆರೋಪಿ
author img

By

Published : Dec 12, 2020, 3:45 PM IST

ಕಟಪಾಡಿ: ಸುಳ್ಳು ದಾಖಲೆ ಪತ್ರ ನೀಡಿ ಮೂರನೇ ಮದುವೆಯಾಗಿ ವಂಚಿಸಿ ಕಳೆದ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಕಾಪು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೂಳೂರು ನಿವಾಸಿ ಮೊಹಮ್ಮದ್‌ ರಫೀಕ್ ‌(44) ಬಂಧಿತ ಆರೋಪಿ. ಈತ ಮೂರನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಜಮಾತ್‌ ವ್ಯಾಪ್ತಿಯ ಮಸೀದಿಯ ಲೆಟರ್‌ಹೆಡ್‌ ದುರುಪಯೋಗ ಮಾಡಿಕೊಂಡಿದ್ದ. ಈ ಸಂಬಂಧ 2000ನೇ ಇಸವಿಯಲ್ಲಿ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುರುವಾರ ಉಳ್ಳಾಲದಲ್ಲಿ ಆರೋಪಿಯ ಎರಡನೇ ಪತ್ನಿಯ ಮಗಳ ಮದುವೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಕಾಪು ಕ್ರೈಂ ಎಸ್‌ಐ ಗಡ್ಡೇಕರ್‌, ಸಿಬ್ಬಂದಿ ಸುಧಾಕರ್‌, ರಫೀಕ್‌, ಸಂದೇಶ್‌, ಆನಂದ್‌ ಕಾರ್ಯಾಚರಣೆ ನಡೆಸಿ, ಮಗಳ ಮದುವೆ ಮುಗಿದ ಬಳಿಕ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಳ್ಳಾಲದಲ್ಲಿ ಸೆರೆಸಿಕ್ಕ ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.