ಉಡುಪಿ: ಜಿಲ್ಲಾ ಪಂಚಾಯತ್ನ ಹೊರ ಗುತ್ತಿಗೆ ನೌಕರರಿಗೆ ಕೊರೊನಾ ಸೋಂಕು ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಜಿಪಂ ಕಚೇರಿ ಮುಚ್ಚಿರುತ್ತೆ. ಸಿಇಒ ಸಹಿತ ಎಲ್ಲಾ ಸಿಬ್ಬಂದಿ ಕಚೇರಿಗೆ ಬರುವುದಿಲ್ಲ ಎಂದು ಜಿಪಂ ಸಿಇಒ ಪ್ರೀತಿ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.
ಇನ್ನು ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಎಸ್ಪಿ ಕಚೇರಿ ಸೈನಿಟೈಸ್ ಮಾಡಿದ್ದು, ಈಗ ಮತ್ತೊಮ್ಮೆ ಸೈನಿಟೈಸ್ ಮಾಡುತ್ತೇವೆ. ಎಸ್ಪಿ ಕಚೇರಿ ತೆರೆದಿರುತ್ತದೆ ಎಂದು ವಿಷ್ಣುವರ್ಧನ್ ಸ್ಪಷ್ಟನೆ ನೀಡಿದ್ದಾರೆ.
ಸೋಂಕಿತ ವ್ಯಕ್ತಿ ಮೇ 19ಕ್ಕೆ ಕೊನೆಯ ಬಾರಿ ಕಚೇರಿಗೆ ಬಂದಿದ್ದ. ಕಚೇರಿಗೆ ಬಂದಾಗ ಶೀತ ಮತ್ತು ಕೆಮ್ಮಿನ ಲಕ್ಷಣಗಳಿತ್ತು. ಸೋಂಕಿನ ಲಕ್ಷಣಗಳಿದ್ದ ಕಾರಣ ಆತನ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಕಳೆದ ಐದು ದಿನಗಳಲ್ಲಿ ಅನೇಕ ಬಾರಿ ಜಿಪಂ ಕಚೇರಿ ಸ್ಯಾನಿಟೈಸ್ ಮಾಡಲಾಗಿದೆ. ನಾಳೆ ಮತ್ತೊಮ್ಮೆ ಜಿಪಂ ಕಚೇರಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.