ಉಡುಪಿ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಮಣಿಪಾಲದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದವು. ಇದರಿಂದ ರೋಸಿ ಹೋದ ರಿಕ್ಷಾ ಚಾಲಕರು ಶ್ರಮದಾನದ ಮೂಲಕ ತಾವೇ ರಸ್ತೆ ರಿಪೇರಿಗೆ ಮುಂದಾಗಿದ್ದರು.
ಕಳೆದ ನಾಲ್ಕಾರು ತಿಂಗಳು ಕಳೆದರೂ ರಸ್ತೆ ರಿಪೇರಿ ಆಗಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ ವಿಸ್ತರಿಸುವ ಕಾಮಗಾರಿ ನಡೆಯುತ್ತಿದ್ದು, ಜನ ಸಂಚಾರವೇ ಕಷ್ಟವಾಗಿದೆ. ಯಾವುದೇ ತಾತ್ಕಾಲಿಕ ಕಾಮಗಾರಿ ಕೈಗೊಳ್ಳದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು, ವಿದ್ಯಾರ್ಥಿಗಳು ಸಂಚರಿಸಲು ಹರಸಾಹಸ ಪಡುವಂತಾಗಿತ್ತು.
ಈ ಬಗ್ಗೆ ದೂರಿ ನೀಡಿ ಸುಸ್ತಾದ ರಿಕ್ಷಾ ಚಾಲಕರು. ಇಂದು ಸ್ವತಃ ತಾವೇ ರಸ್ತೆ ರಿಪೇರಿಗೆ ಇಳಿದಿದ್ದಾರೆ. ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿ ಆಡಳಿತ ವ್ಯವಸ್ಥೆಗೆ ಸಡ್ಡು ಹೊಡೆದಿದ್ದಾರೆ. ಈ ಮೂಲಕ ರಿಕ್ಷಾ ಚಾಲಕರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.