ETV Bharat / state

ಉಡುಪಿಯ ಮನೆ ತಾರಸಿ ಮೇಲೆ ಬಗೆಬಗೆ ತರಕಾರಿ, ಹಣ್ಣು ಬೆಳೆ: ನೀವೂ ಬೆಳೆಯಬೇಕೆ? - ತಾರಸಿ ಕೃಷಿಯಲ್ಲಿ ಖುಷಿ ಕಂಡ ಉಡುಪಿಯ ಜನತೆ

ಸಾವಯವ ಪದ್ಧತಿಯಲ್ಲಿ ತರಕಾರಿ, ಹಣ್ಣಿನ ಕೃಷಿ ಮಾಡುವ ಇವರು, ತಾರಸಿ ಕೃಷಿಯಿಂದ ಖರ್ಚು ಕಡಿಮೆ, ಮನಸ್ಸಿಗೂ ಖುಷಿ ಇದೆ ಅಂತಾರೆ.

The people of Udupi who cultivate the terrace
ತಾರಸಿ ಕೃಷಿಯಲ್ಲಿ ಖುಷಿ ಕಂಡ ಉಡುಪಿಯ ಜನತೆ
author img

By

Published : Apr 27, 2021, 9:14 AM IST

ಉಡುಪಿ: ನಗರದಲ್ಲಿ ತರಕಾರಿ, ಹಣ್ಣಿನ ತೋಟ ನಿರ್ಮಿಸಬೇಕೆಂಬ ಮನಸ್ಸಿದ್ದವರಿಗೆ ಮೊದಲು ಎದುರಾಗುವ ಸಮಸ್ಯೆ ಸ್ಥಳಾವಕಾಶದ್ದು. ಈ ಸಮಸ್ಯೆ ನೀಗಿಸಲು ಇತ್ತೀಚಿನ ದಿನಗಳಲ್ಲಿ ಉಡುಪಿಯ ಜನರು ತಾರಸಿ ಕೃಷಿಯತ್ತ ಒಲವು ತೋರುತ್ತಿದ್ದಾರೆ.

ತಾರಸಿ ಕೃಷಿಯಲ್ಲಿ ಖುಷಿ ಕಂಡ ಉಡುಪಿಯ ಜನತೆ

ತೊಂಡೆ, ಬೆಂಡೆ, ಹಲಸಂದೆ ಹೀಗೆ.. ಬಗೆ-ಬಗೆಯ ತರಕಾರಿ, ಚುಕ್ಕು, ಜಮನೇರಳು, ಲಿಂಬೆ ಸೇರಿದಂತೆ ವಿವಧ ಹಣ್ಣುಗಳನ್ನು ಮನೆಯ ತಾರಸಿ ಮೇಲೆ ಬೆಳೆಯಲಾಗುತ್ತಿದೆ. ನಗರದ ಜೋಸೆಫ್ ಎನ್ನುವವರು ಈ ಕೃಷಿಯಲ್ಲಿ ಪರಿಣತರಾಗಿದ್ದಾರೆ. ಹಲವು ವರ್ಷಗಳಿಂದ ಮನೆಯ ತಾರಸಿ ಮೇಲೆ ವಿವಿಧ ವಿವಿಧ ತರಕಾರಿ ಹಾಗೂ ಹಣ್ಣಗಳನ್ನು ಇವರು ಬೆಳೆಯುತ್ತಿದ್ದಾರೆ. ಸಾವಯವವಾಗಿ ತರಕಾರಿ ಹಣ್ಣಿನ ಕೃಷಿ ಮಾಡುತ್ತಿದ್ದು, ತಾರಸಿ ಕೃಷಿಯಿಂದ ಖರ್ಚು ಕಡಿಮೆ, ಮನಸ್ಸಿಗೂ ಖುಷಿ ಇದೆ ಅಂತಾರೆ. ಇದ್ರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು, ತಾರಸಿ ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಮಾಹಿತಿ ನೀಡುತ್ತಿದ್ದಾರೆ.

ನಾಟಕ ಕಲಾವಿದರಾದ ನಾಗೇಶ್ ಕಾಮತ್ ಹಾಗೂ ಮಗ ಪ್ರಥಮ್ ಕಾಮತ್ ಕೂಡ ತಾರಸಿ ಕೃಷಿ ಮಾಡಿ ಖುಷಿ ಕಂಡವರು. ತಾರಸಿ ಮೇಲೆ ನೆರಳು ಇರೋದಿಲ್ಲ, ತರಕಾರಿ ತೋಟಕ್ಕೆ ಬಿಸಿಲು ಮುಖ್ಯ ಎಂಬುದನ್ನು ಅರಿತು ಕೊಂಡು, ತಂದೆ-ಮಗ ಸೇರಿ ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ಪ್ಲಾಸ್ಟಿಕ್ ಚೀಲಕ್ಕೆ ಮಣ್ಣು ತುಂಬಿಸಿ, ಸಾವಯವ ಗೊಬ್ಬರ ಹಾಕಿ ಬೆಳೆಯುವ ವಿಧಾನ ನೋಡಲು ಅಂದವಾಗಿದೆ. ಪೌಷ್ಟಿಕಾಂಶವುಳ್ಳ, ಸಾವಯವ ತರಕಾರಿ ಎಲ್ಲಿದೆ ಅಂತ ಹುಡುಕುವ ಬದಲು, ಸ್ಥಳದ ಕೊರತೆ ಇದ್ರೂ ಈ ರೀತಿಯಲ್ಲಿ ತಾರಸಿ ಕೃಷಿ ಮಾಡೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು, ಖರ್ಚು ಕಡಿಮೆ, ಮನಸ್ಸಿಗೂ ಖುಷಿ ಅನ್ನೋದು ನಾಗೇಶ್ ಕಾಮತ್ ಅವರ ಅಭಿಪ್ರಾಯ.

ಇದನ್ನೂ ಓದಿ : ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್​: ಇಂದಿನಿಂದ ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.