ಉಡುಪಿ : ಗ್ರಾಮ ಪಂಚಾಯತ್ ಆಗಿದ್ದರೂ ಮಹಾನಗರ ಪಾಲಿಕೆಗೆ ಸರಿಸಮಾನವಾಗಿ ಕೆಲಸ ಮಾಡಬಹುದು ಎನ್ನುವುದನ್ನು ಜಿಲ್ಲೆಯ ಕಡೆಕಾರು ಗ್ರಾಮ ಪಂಚಾಯತ್ ತೋರಿಸಿಕೊಟ್ಟಿದೆ.
ಗ್ರಾಮ ಪಂಚಾಯತ್‌ನ ಕುತ್ಪಾಡಿ 11ನೇ ವಾರ್ಡ್ನಲ್ಲಿ ಸುಸಜ್ಜಿತ ಕಾಂಕ್ರಿಟ್ ರಸ್ತೆ, ಪ್ರತಿ ಅಡ್ಡ ರಸ್ತೆಗೆ ನಾಮ ಫಲಕಗಳು, ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಜೊತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ರೀತಿಯ ಸೌಲಭ್ಯಗಳನ್ನ ಕಲ್ಪಿಸಿದ ಉಡುಪಿ ಜಿಲ್ಲೆಯ ಪ್ರಥಮ ಗ್ರಾಮ ಪಂಚಾಯತ್ ಇದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಕುತ್ಪಾಡಿ ಕಟ್ಟೆ ಗುಡ್ಡೆ ಪ್ರದೇಶದಲ್ಲಿ ಜನನಿಬಿಡ ಪ್ರದೇಶದಲ್ಲಿ ರಾತ್ರಿ-ಹಗಲೆನ್ನದೆ ಸಾವಿರಾರು ಜನರು ಈ ರಸ್ತೆಯಲ್ಲಿ ಓಡಾಟ ಮಾಡುತ್ತಾರೆ. 8 ಸಿ ಸಿ ಕ್ಯಾಮೆರಾ ಜೊತೆಗೆ ಸ್ಮಾರ್ಟ್ ಟಿವಿಯನ್ನು ಇಲ್ಲಿ ಅಳವಡಿಸಲಾಗಿದೆ.
ಇದರ ಉದ್ಘಾಟನೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಮಾಡಿದ್ದಾರೆ. ನಂತರ ಮಾತನಾಡಿದ ಅವರು, ಸ್ಥಳೀಯ ಗ್ರಾಮ ಪಂಚಾಯತ್ ಗ್ರಾಮದ ಜನರ ಬೇಡಿಕೆಗೆ ಅನುಗುಣವಾಗಿ ಕೆಲಸ ಮಾಡುವುದರ ಜೊತೆಗೆ ಉಡುಪಿ ಜಿಲ್ಲೆಯಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಿದ ಪ್ರಥಮ ಗ್ರಾಮ ಪಂಚಾಯತ್ ಇದಾಗಿದೆ.
ಕುತ್ಪಾಡಿಯ ಪ್ರದೇಶವನ್ನು ಸ್ಮಾರ್ಟ್ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ಸುಸಜ್ಜಿತ ಮಕ್ಕಳ ಬಾಲವನ, 11ನೇ ವಾರ್ಡಿನ ಎಲ್ಲಾ ಪ್ರದೇಶಗಳಲ್ಲಿ LED ದಾರಿದೀಪ ಅಳವಡಿಕೆ, ಸರಾಸರಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ, ರಸ್ತೆಯ ಬದಿಯಲ್ಲಿ ಇಂಟರ್ಲಾಕ್ ಅಳವಡಿಕೆ.
ಗ್ರಾಮ ಪಂಚಾಯತ್ ಅನುದಾನದ ಜೊತೆಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರ, ಸಂಸದರ, ಅನುದಾನಗಳನ್ನು ಬಳಕೆ ಮಾಡಿ ಗ್ರಾಮದ ಅಭಿವೃದ್ಧಿ ಮಾಡಲಾಗಿದೆ.