ಉಡುಪಿ: ಸೌದಿಯಲ್ಲಿ ಬಂಧನವಾಗಿರುವ ಹರೀಶ್ ಬಂಗೇರ ಬಿಡುಗಡೆಗಾಗಿ ಅವರ ಮನೆಯವರು ಹಾಗೂ ಸ್ನೇಹಿತರಿಂದ ಆನೆಗುಡ್ಡೆ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು.
ಸೌದಿಯ ದಮಮ್ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್, ಶೀಘ್ರ ಬಿಡುಗಡೆ ಆಗಲಿ ಎಂದು ಸಾಂಪ್ರದಾಯಿಕ ಭಜನೆಯ ಮೂಲಕ ಪಾದಯಾತ್ರೆ ಮಾಡಿದರು. ನಂತರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಇದಾದ ಬಳಿಕ ಹರೀಶ್ ಬಂಗೇರ ಅವರ ಪತ್ನಿ ಸುಮನ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಮನವಿ ನೀಡಿದರು.
ವಿದೇಶಾಂಗ ಸಚಿವರ ಬಳಿ ಮಾತಾಡಿರುವುದಾಗಿ ಭರವಸೆ ನೀಡಿದ ಸಿಎಂ ಬಿಎಸ್ವೈ, ಭಾರತೀಯ ರಾಯಭಾರಿ ಕಛೇರಿಯಿಂದ ಸೌದಿ ಸರ್ಕಾರಕ್ಕೆ ವಿವರಗಳನ್ನು ಈಗಾಗಲೇ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದ್ರು.
ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಹಾಗೂ ಮೆಕ್ಕಾ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಹರೀಶ್ ಅವರನ್ನು ಬಂಧಿಸಲಾಗಿದೆ.