ETV Bharat / state

ಸಂಭ್ರಮಿಸಲು ಹೋದ ಇಬ್ಬರ ಸಾವು.. ರಸ್ತೆ ಮೇಲೆ ಶುಭಾಶಯ ಕೋರಲು ಮುಂದಾಗಿದ್ದವರ ಮೇಲೆ ಹರಿದ ವಾಹನ!

ಘಟನಾ ಸ್ಥಳದಲ್ಲಿ ದಾರಿದೀಪ ಹದಗೆಟ್ಟ ಕಾರಣ ರಸ್ತೆಯ ಮಧ್ಯೆ ಬರೆಯಲು ಕುಳಿತಿದ್ದ ಯುವಕರು ಕಾರಿನಲ್ಲಿದ್ದವರಿಗೆ ಕಂಡಿರುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಇವರ ಜೊತೆ ತೌಸಿಫ್ ಮತ್ತು ಬಸವ ಎಂಬ ಇನ್ನಿಬ್ಬರು ಸ್ಥಳದಲ್ಲಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ..

the-death-of-young-men-seeking-a-greeting-on-the-road
ಯುವಕ
author img

By

Published : Jan 1, 2021, 4:06 PM IST

ಉಡುಪಿ : ಜಿಲ್ಲೆಯ ಕಾರ್ಕಳ ತಾಲೂಕಿನ ಹೊರವಲಯದಲ್ಲಿರುವ ಮಿಯಾರಿನ ರಸ್ತೆಯ ಮೇಲೆ ಹ್ಯಾಪಿ ನ್ಯೂ ಇಯರ್ 2021 ಎಂದು ಬರೆಯಲು ನಾಲ್ವರು ಯುವಕರು ಮುಂದಾಗಿದ್ದರು. ಈ ವೇಳೆ ಎದುರಿನಿಂದ ಬಂದ ಮಾರುತಿ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ರಸ್ತೆ ಅಪಘಾತ ನಡೆದಿರುವ ಸ್ಥಳ

ಬಾಗಲಕೋಟೆ ಮೂಲದವರಾದ ಶರಣ್ ಮತ್ತು ಸಿದ್ದು ಇಲ್ಲಿನ ಖಾಸಗಿ ವ್ಯಕ್ತಿಯೊಬ್ಬರ ಜೊತೆ ಜೆಸಿಬಿ ಆಪರೇಟರ್ ಹಾಗೂ ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ತಡರಾತ್ರಿ ಏನಾದ್ರೂ ಡಿಫರೆಂಟಾಗಿ ಹೊಸವರ್ಷಕ್ಕೆ ಶುಭಾಶಯ ಕೋರುವ ಎಂದು ಪೇಯಿಂಟ್​ನಲ್ಲಿ ರಸ್ತೆ ಮೇಲೆ ಬರಹವನ್ನು ಬರೆಯಲು ಹೊರಟಾಗ ಈ ದುರಂತ ಸಂಭವಿಸಿದೆ. ಇವರ ಪೈಕಿ ಶರಣು ಸ್ಥಳದಲ್ಲೇ ಮೃತಪಟ್ಟರೆ, ಸಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಓದಿ: ಮದ್ಯ ಮಾರಾಟ ಇಳಿಕೆ.. ಕಳೆದ ವರ್ಷಕ್ಕಿಂತ ಶೇ 20 ಆದಾಯ ಕುಸಿತ

ಕಾರ್ಕಳದ ಮಿಯ್ಯಾರಿನ ರಸ್ತೆಯ ಅಗಲೀಕರಣವಾಗಿದ್ದರೂ ಕೂಡ ಹಲವಾರು ಜನರು ಬಲಿಯಾಗಿದ್ದಾರೆ. ಆದರೆ, ನಿನ್ನೆ ನಡೆದ ಘಟನೆಗೆ ಯುವಕರ ಅಜಾಗರೂಕತೆಯೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ದಾರಿದೀಪ ಹದಗೆಟ್ಟ ಕಾರಣ ರಸ್ತೆಯ ಮಧ್ಯೆ ಬರೆಯಲು ಕುಳಿತಿದ್ದ ಯುವಕರು ಕಾರಿನಲ್ಲಿದ್ದವರಿಗೆ ಕಂಡಿರುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಇವರ ಜೊತೆ ತೌಸಿಫ್ ಮತ್ತು ಬಸವ ಎಂಬ ಇನ್ನಿಬ್ಬರು ಸ್ಥಳದಲ್ಲಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.