ETV Bharat / state

ಏ.14ರವರೆಗೆ ಬಂಧು ಬಳಗ, ಕಕ್ಷೀದಾರರಿಗೆ ಪ್ರವೇಶವಿಲ್ಲ: ಹೀಗಿದೆ ವಕೀಲರ ಮನೆ ಮುಂದಿನ ಬೋರ್ಡ್ - ವಕೀಲ ಆನಂದ ಮಡಿವಾಳ

ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರವರ ಮನೆಯಲ್ಲೇ ಸುರಕ್ಷಿತವಾಗಿರುವಂತೆ ಆದೇಶಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ವಕೀಲರು ಮನೆ ಮುಂದೆ ವಿಶಿಷ್ಟವಾದ ಬೋರ್ಡ್ ಅಳವಡಿಸಿಕೊಂಡಿದ್ದಾರೆ.

The board in front of advocate house is attracting everyone
ಎಲ್ಲರ ಗಮನ ಸೆಳೆಯುತ್ತಿದೆ ವಕೀಲರ ಮನೆ ಮುಂದಿನ ಬೋರ್ಡ್​...!!
author img

By

Published : Mar 27, 2020, 12:18 PM IST

ಉಡುಪಿ: ಜಿಲ್ಲೆಯಲ್ಲಿ ವಕೀಲರೊಬ್ಬರು ಕೊರೊನಾ ಸಂಬಂಧಿಸಿದಂತೆ ತಮ್ಮ ಮನೆ ಮುಂದೆ ಹಾಕಿರುವ ಬೋರ್ಡ್ ಎಲ್ಲರ ಗಮನ ಸೆಳೆಯುತ್ತಿದೆ.

ಎಲ್ಲರ ಗಮನ ಸೆಳೆಯುತ್ತಿದೆ ವಕೀಲರ ಮನೆ ಮುಂದಿನ ಬೋರ್ಡ್​...!!

ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರವರ ಮನೆಯಲ್ಲೇ ಸುರಕ್ಷಿತವಾಗಿರುವಂತೆ ಆದೇಶಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ವಕೀಲರು ಮನೆ ಮುಂದೆ ವಿಶಿಷ್ಟವಾದ ಬೋರ್ಡ್ ಅಳವಡಿಸಿಕೊಂಡಿದ್ದಾರೆ.

ವಕೀಲರಾದ ಆನಂದ ಮಡಿವಾಳ ಎಂಬುವವರೆ ಸಾಮಾಜಿಕ ಕಾಳಜಿ ಮೆರೆದ ವಕೀಲರು. ಏಪ್ರಿಲ್ 14ರ ವರೆಗೆ ಕಕ್ಷಿದಾರರಾಗಲಿ ಸಂಬಂಧಿಕರಾಗಲೀ ಯಾರಿಗೂ ನನ್ನ ಮನೆಯ ಒಳಗೆ ಪ್ರವೇಶವಿಲ್ಲ ಎಂದು ಸೂಚನಾಫಲಕ ಅಳವಡಿಸಿದ್ದಾರೆ. ಈ ಮೂಲಕ ನಾನಂತೂ ಮನೆಯಲ್ಲಿ ಇರುತ್ತೇನೆ ನೀವು ಕೂಡ ನಿಮ್ಮ ನಿಮ್ಮ ಮನೆಗಳಲ್ಲಿ ಸೇಫ್ ಆಗಿರಿ ಎಂದು ಸಾರಿ ಹೇಳುತ್ತಿದ್ದಾರೆ.

The board in front of advocate house is attracting everyone
ವಕೀಲ ಆನಂದ ಮಡಿವಾಳ

ಅಷ್ಟೇಅಲ್ಲದೇ, ತುರ್ತು ಅಗತ್ಯ ಇದ್ರೆ ಫೋನ್ ಮಾಡಿ ಅಂತ ತನ್ನ ಮೊಬೈಲ್ ಸಂಖ್ಯೆಯನ್ನು ಕೂಡ ಈ ಫಲಕದಲ್ಲಿ ನಮೂದಿಸಿದ್ದಾರೆ. ಕೊರೊನಾ ವೈರಸ್ ಅನ್ನು ಓಡಿಸಲು ಮತ್ತು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ನಾವೆಲ್ಲಾ ಪಣ ತೊಡಲೇ ಬೇಕು. ಇದು ಸಾಮಾಜಿಕ ಕಾಳಜಿಯ ಚಿಕ್ಕ ಸಂದೇಶ ಎಂದು ಆನಂದ ಮಡಿವಾಳರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.