ಉಡುಪಿ: ಸೂಡಾ ಗ್ರಾಮದ ಕ್ರಷರ್‌ನಲ್ಲಿ ಅಳವಡಿಸಿದ ಸುಮಾರು ₹40 ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿ ಗುಜರಿಗೆ ಮಾರಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಶಿಕ್ಷಕ ಸೇರಿ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
168-P1ರಲ್ಲಿ ಸುಮಾರು ಮೂರೂವರೆ ಎಕರೆ ಪ್ರದೇಶದ ಕ್ರಷರ್‌ನಲ್ಲಿ ಜೋಡಣೆಯಾಗಿದ್ದ ಯಂತ್ರೋಪಕರಣ ಫೆ.27ರಿಂದ ಏ.22ರ ಅವಧಿಯಲ್ಲಿ ಕಳ್ಳತನವಾಗಿದ್ದು, ಈ ಕುರಿತು ಮಾಲೀಕ ಸುರೇಶ್ ಶೆಟ್ಟಿ ಎಂಬುವರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಸೂಡಾದ ಶಿಕ್ಷಕ ರಿತೇಶ್ ಶೆಟ್ಟಿ (50) ಹಾಗೂ ಚರಣ್ ನಾಯಕ್ (29) ಎಂಬವರು ಪ್ರಕರಣದ ಆರೋಪಿಗಳು ಎಂಬುದು ತಿಳಿದು ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಚರಣ್ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ಸುರೇಶ್ ಅವರಿಗೆ ಸೇರಿರುವ ಕ್ರಷರ್ನೊಳಗೆ ನಮ್ಮದು ಎಂದು ಹೇಳಿ ಮಂಗಳೂರಿನ ಗುಜುರಿ ವ್ಯಾಪಾರಿಗಳಾದ ಹುಸೈನ್ ಹಾಗೂ ಇಸ್ಮಾಯಿಲ್ ಅವರನ್ನು ಕರೆದುಕೊಂಡು ಬಂದು ವ್ಯಾಪಾರ ಕುದುರಿಸಿದ್ದ. ಕ್ರಷರ್ ಬಂದಾಗಿ ವರ್ಷಗಳೇ ಕಳೆದಿವೆ. ಅದನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವುದಾಗಿ ನಂಬಿಸಿದ್ದ.
![teacher-journalist-who-sold-machinery-to-gujri](https://etvbharatimages.akamaized.net/etvbharat/prod-images/6933687_14_6933687_1587800775072.png)
ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ಕ್ರಷರ್‌ನಲ್ಲಿದ್ದ ಯಂತ್ರೋಪಕರಣಗಳು ಹಾಗೂ ಬಿಡಿ ಭಾಗಗಳನ್ನು ಮಾರಿದ್ದ.