ETV Bharat / state

ಉಡುಪಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು... ಗಂಡನ ಮನೆಯವರ ಮೇಲೆ ಗುಮಾನಿ

ಕೊಪ್ಪಳ ಮೂಲದ ಗೃಹಿಣಿವೋರ್ವಳು ಉಡುಪಿ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈಕೆಯ ಸಾವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಉಡುಪಿಯಲ್ಲಿ ಗೃಹಿಣಿ ಅನುಮಾನಸ್ಪದ ಸಾವು
Suspected death of a housewife in Udupi
author img

By

Published : Feb 6, 2020, 1:04 PM IST

Updated : Feb 6, 2020, 1:27 PM IST

ಉಡುಪಿ: ಕೊಪ್ಪಳ ಮೂಲದ ಗೃಹಿಣಿಯೋರ್ವಳು ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಈ ಸಾವಿನಿಂದ ಗಂಡನ ಮನೆಯವರ ಮೇಲೆ ಶಂಕೆ ವ್ಯಕ್ತವಾಗಿದೆ.

ಉಡುಪಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು, ಗಂಡನ ಮನೆಯವರ ಮೇಲೆ ಗುಮಾನಿ

ಹನುಮವ್ವ ಸಾವನ್ನಪ್ಪಿದ ಗೃಹಿಣಿ. ಈಕೆ ಕಳೆದ ಎಂಟು ತಿಂಗಳ ಹಿಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಮಂಜು ಎಂಬುವನನ್ನು ಮದುವೆಯಾಗಿ ಉಡುಪಿಯಲ್ಲಿ ನೆಲೆಸಿದ್ದಳು. ಮದುವೆಯಾದ ಹೊಸದರಲ್ಲೇ ಗಂಡ, ಅತ್ತೆ-ಮಾವನಿಂದ ನಿರಂತರ ಕಿರುಕುಳ ಅನುಭವಿಸಿದ್ದಳೆನ್ನಲಾದ ಹನುಮವ್ವ, ಅಕ್ಷರಶಃ ಗೃಹ ಬಂಧನದಲ್ಲಿದ್ದಳಂತೆ. ಈ ಬಗ್ಗೆ ತನ್ನ ಅಕ್ಕನ ಬಳಿ ಅನೇಕ ಬಾರಿ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ. ಜ.31ರಂದು ಗಂಡನ ಮನೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಆಕೆಯ ಪೋಷಕರು ಗಂಡನ ಮನೆಯವರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.

ಹನುಮವ್ವನ ಸಾವಿನ ಬಗ್ಗೆ ಗಂಡನ ಮನೆಯವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಆಕೆ ಮಂಚದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿಕೆ ನೀಡಿದ್ದರು.

ಇದೆಲ್ಲ ಸುಳ್ಳು. ಗಂಡನ ಮನೆಯವರೇ ವ್ಯವಸ್ಥಿತ ಕೊಲೆ ಮಾಡಿದ್ದಾರೆ ಎಂಬುದು ಹನುಮವ್ವನ ಮನೆಯವರ ಹಾಗೂ ಗ್ರಾಮಸ್ಥರ ಗಂಭೀರ ಆರೋಪವಾಗಿದೆ. ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಬರಬೇಕಾಗಿದ್ದು, ಸಾವಿನ ಸಮಗ್ರ ತನಿಖೆ ಆಗಬೇಕಾಗಿದೆ. ಮನೆಯಿಂದ ಹೊರ ದಬ್ಬಿರುವ ಮೊದಲ ಪತ್ನಿಗೂ ನ್ಯಾಯ ಸಿಗಬೇಕು ಅನ್ನೋದು ಗ್ರಾಮಸ್ಥರ ಒತ್ತಾಯವಾಗಿದೆ.

Intro:ಌಂಕರ್-ಉಡುಪಿಯಲ್ಲಿ ವಾಸಿಸುವ ವಲಸೆ ಕಾರ್ಮಿಕರ ಬದುಕು ಅನಿಶ್ಚಿತತೆಗಳ ಆಗರವಾಗಿದೆ. ಕೊಪ್ಪಳ ಮೂಲದ ಗೃಹಿಣಿಯೊಬ್ಬಳ ಸಾವು ಈಗ ಹಲವು ಸಂಶಯಗಳಿಗೆ ಎಡೆಮಾಡಿದೆ. ಆಕೆಯ ಸಾವಿನ ಬಗ್ಗೆ ಗಂಡನ ಮನೆಯವರು ಹೇಳುತ್ತಿರುವ ಗೊಂದಲಕಾರಿ ಹೇಳಿಕೆಗಳು ಸಂಶಯವನ್ನು ದೃಢಪಡಿಸುತ್ತಿದೆ. ಊರಿನ ಜನರು ಮೃತಳ ಬೆಂಬಲಕ್ಕೆ ನಿಂತಿದ್ದು, ಮರಣೋತ್ತರ ಪರೀಕ್ಷೆ ನಿರೀಕ್ಷಿಸಲಾಗುತ್ತಿದೆ.

ವಾಯ್ಸ್-ದುಡಿದು ತಿನ್ನೋದಕ್ಕೆ ಊರು ಬಿಟ್ಟು ಯಾವುದೋ ಊರಿಗೆ ವಲಸೆ ಬಂದಿರ್ತಾರೆ. ಬಂದ ಊರಲ್ಲಿ ಇವರಿಗೆ ಹೇಳೋರು, ಕೇಳೋರು ಯಾರೂ ಇರೋದಿಲ್ಲ. ಗಂಡನನ್ನೇ ನಂಬಿ ದೂರದ ಕೊಪ್ಪಳದಿಂದ ಬಂದ ಗೃಹಿಣಿಯೊಬ್ಬಳು ಈಗ ಅಸುನೀಗಿದ್ದಾಳೆ. ಆಕೆಯ ಮನೆಯವರು ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ. ಕೊಪ್ಪಳದ ಹನುಮವ್ವ ಎಂಬ ಅಪ್ರಾಪ್ತ ವಯಸ್ಸಿನ ಯುವತಿ, ಬಾಗಲಕೋಟೆ ಮೂಲದ ಮಂಜು ಎಂಬವನನ್ನು ಎಂಟು ತಿಂಗಳ ಹಿಂದೆ ಮದುವೆಯಾಗಿದ್ದಳು. ಮೇಸ್ತ್ರಿ ಕೆಲಸ ಮಾಡುವ ಮಂಜು ಈ ಮೊದಲೇ ಒಂದು ಮದುವೆಯಾಗಿದ್ದ, ಮೊದಲ ಪತ್ನಿಯನ್ನು ಮನೆಬಿಟ್ಟು ಓಡಿಸಿದ್ದ. ಈ ವಿಷಯ ತಿಳಿದಾಗ ತಡವಾಗಿತ್ತು. ಮದುವೆಯಾದ ಹೊಸತರಲ್ಲೇ ಗಂಡನ ಮನೆಯಲ್ಲಿ ಹಿಂಸೆ, ಅತ್ತೆ ಮಾವನಿಂದ ನಿರಂತರ ಕಿರುಕುಳ ಅನುಭವಿಸಿದ ಹನುಮವ್ವ, ಕಳೆದ ಎಂಟೂ ತಿಂಗಳು ಅಕ್ಷರಷ: ಗೃಹಬಂಧನದಲ್ಲಿದ್ದಳಂತೆ. ಈ ಬಗ್ಗೆ ಹನುಮವ್ವ ಅಕ್ಕನ ಬಳಿ ಅನೇಕ ಬಾರಿ ಹೇಳಿಕೊಂಡಿದ್ದಳು. ಜನವರಿ 31 ರಂದು ಈಕೆ ಗಂಡನ ಮನೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸತ್ತಿದ್ದಾಳೆ.

ಬೈಟ್-

ವಾಯ್ಸ್-ಈ ಸಾವಿನ ಬಗ್ಗೆ ಹನುಮವ್ವ ತವರು ಮನೆಯವರು ಸಂಶಯ ವ್ಯಕ್ತಪಡಿಸಿದ್ದಾಳೆ.ಈಕೆಯ ತಂದೆ ತಾಯಿ ಯಾರೂ ಬದುಕಿಲ್ಲ. ತವರು ಮನೆಯಲ್ಲೂ ಈಕೆ ಒಂಟಿ. ಗಂಡನ ಮನೆಯವರು ವರದಕ್ಷಿಣೆಗಾಗಿ ಕೊಟ್ಟ ಕಿರುಕುಳದಿಂದಲೇ ಈಕೆ ಸತ್ತಿರೋದಂತೂ ಖಂಡಿತ. ಆಸುಪಾಸಿನ ಮನೆಯವರ ಹೇಳಿಕೆಗಳೂ ಇದೊಂದು ಸಂಶಯಾಸ್ಪದ ಸಾವು ಅನ್ನೋದನ್ನು ದೃಢೀಕರಿಸುತ್ತದೆ. ಆದರೆ ಗಂಡನ ಮನೆಯವರ ಹೇಳಿಕೆಯೂ ಗೊಂದಲಕಾರಿಯಾಗಿದೆ. ಗಂಭೀರ ಸ್ಥಿತಿಯಲ್ಲಿ ಹನುಮವ್ವಳನ್ನು ಆಸ್ಪತ್ರೆಗೆ ತರುವಾಗ ಆಕೆ ಮಂಚದಿಂದ ಬಿದ್ದಳು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಆಕೆಯ ಸಾವು ದೃಢವಾಗುತ್ತಿದ್ದಂತೆ ಕಪಾಟಿನ ರಾಡ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು ಎನ್ನುತ್ತಿದ್ದಾರೆ. ಕಪಾಟಿನ ರಾಡ್ ಗೆ ನೇಣು ಬಿಗಿಯಲು ಸಾಧ್ಯವೇ ಇಲ್ಲ. ಹಾಗಾಗಿ ಇದೊಂದು ವ್ಯವಸ್ಥಿತ ಕೊಲೆ ಎಂದು ಹನುಮವ್ವ ಮನೆಯವರು ಆರೋಪಿಸಿದ್ದಾರೆ. ಊರಿನವರ ಹೇಳಿಕೆಯೂ ಇದು ಕೊಲೆ ಅನ್ನೋದನ್ನು ಪುಷ್ಟೀಕರಿಸುತ್ತದೆ.

ಬೈಟ್-

ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಬರಬೇಕಾಗಿದೆ. ಈ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ. ಮನೆಯಿಂದ ಹೊರ ಬ್ಬಿರುವ ಮೊದಲ ಪತ್ನಿಗೂ ನ್ಯಾಯ ಸಿಗಬೇಕು ಅನ್ನೋದು ಗ್ರಾಮಸ್ಥರ ಒತ್ತಾಯ.
Byte_ರೆಖಾ, ಸಾರಿ ಉಟ್ಟವರು
ByteಲಿಲಾBody:DeathConclusion:Death
Last Updated : Feb 6, 2020, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.