ETV Bharat / state

ಚಂಡಿಕಾ ಯಾಗದ ಸಂದರ್ಭ ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದ ಸೇಬುಹಣ್ಣು!

author img

By

Published : Oct 25, 2020, 3:57 PM IST

ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ.

special-chandika-yaga-in-kollur
special-chandika-yaga-in-kollur

ಉಡುಪಿ: ನಾಡಿನಾದ್ಯಂತ ನವರಾತ್ರಿ ಉತ್ಸವ ನಡೆಯುತ್ತಿದೆ. ದುರ್ಗೆಯ ಆರಾಧನೆ ಭಕ್ತಿಭಾವದಿಂದ ನಡೆಯುತ್ತಿದೆ. ಈ ನಡುವೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಚಂಡಿಕಾ ಹೋಮದ ಸಂದರ್ಭ ಫಲವೊಂದು ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದು ಎಲ್ಲರಲ್ಲೂ ರೋಮಾಂಚನ ಸೃಷ್ಟಿಸಿದೆ.

ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದ ಸೇಬುಹಣ್ಣು

ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಸನ್ನಿಧಾನದ ದೃಶ್ಯ ಇದು. ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಕೊಲ್ಲೂರಲ್ಲಿ ಹತ್ತು ದಿನಗಳ ಹಿಂದೆಯೇ ಆರಂಭವಾಗಿದೆ.

ನವಮಿಯ ಈ ಶುಭ ದಿನದಂದು ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ. ಭಕ್ತರು ಇದನ್ನು ದೇವಿಯ ಪ್ರಸಾದ ಎಂದು ಬಣ್ಣಿಸಿದ್ದಾರೆ. ದೇವಿ ಮೂಕಾಂಬಿಕೆ ಸೇವೆಯನ್ನು ಸ್ವೀಕರಿಸಿ ಸಂತುಷ್ಟಳಾಗಿದ್ದಾಳೆ ಎಂದು ಭಕ್ತರು ಜೈಕಾರ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.