ಉಡುಪಿ: ಜಿಲ್ಲೆಯ ಬೈಂದೂರಿನ ಬೋರ್ವೆಲ್ ಕೊರೆಯೋ ವೇಳೆ ಕುಸಿತ ಉಂಟಾಗಿ ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಮರವಂತೆ ಸಮೀಪ ಈ ಘಟನೆ ನಡೆದಿದ್ದು, 15 ಅಡಿ ಭೂಮಿಯೊಳಗೆ ಕುಸಿದಿರುವ ರೋಹಿತ್ ಖಾರ್ವಿ ಬೋರ್ವೆಲ್ ತೋಡುವ ವೇಳೆ ಸ್ಥಳದಲ್ಲಿ ನಿಂತಿದ್ದ. ಈ ವೇಳೆ ಬೋರ್ ವೆಲ್ ಪೈಪ್ ಸುತ್ತ ಭೂಮಿ ಕುಸಿದ ಪರಿಣಾಮ ರೋಹಿತ್ ಇದರಡಿ ಸಿಲುಕಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ವೈದ್ಯರು ಆಗಮಿಸಿದ್ದು ರೋಹಿತ್ ಖಾರ್ವಿಯನ್ನು ಮೇಲೆತ್ತಲು ಯತ್ನಿಸುತ್ತಿದ್ದಾರೆ.