ಉಡುಪಿ : ಕೋವಿಡ್-19ರ ಅಬ್ಬರ, ವೀಕೆಂಡ್ ಲಾಕ್ಡೌನ್ ಕಠಿಣ ನಿಯಮದ ನಡುವೆ ಉಡುಪಿಯಲ್ಲಿ ಸಿಂಪಲ್ ಮದುವೆಗಳು ನಡೆಯುತ್ತಿವೆ.
ಇಂದು ಜಿಲ್ಲೆಯಲ್ಲಿ ಅನುಮತಿ ನಡೆದ 354 ಮದುವೆ ನಡೆಯುತ್ತಿವೆ. ಸಾವಿರ ಆಮಂತ್ರಣ ಪತ್ರ ಅಚ್ಚು ಹಾಕಿಸಿದ ಮನೆಗಳು 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯ ಪೂರೈಸುತ್ತಿವೆ.
ಮದುವೆಯನ್ನು ಫೇಸ್ ಬುಕ್, ಯುಟ್ಯೂಬ್ ನಲ್ಲಿ ಲೈವ್ ಮಾಡಿ ಕುಟುಂಬಸ್ಥರು, ಸಂಬಂಧಿಕರು ಮನೆಯಲ್ಲೇ ಕುಳಿತು ಮದುವೆ ನೋಡುತ್ತಿದ್ದಾರೆ.
ನಗರದ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು. ಒಂದೂವರೆ ಸಾವಿರ ಜನರ ವ್ಯವಸ್ಥೆಗೆ ಸಿದ್ಧವಾಗಿದ್ದ ಈ ಜೋಡಿಯ ಕುಟುಂಬಸ್ಥರು, ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದ್ದಾರೆ.
ಮದುವೆ ಮುಂದೂಡಬಹುದಿತ್ತು, ನಿಗದಿಯಾದ ಘಳಿಗೆ ಚೆನ್ನಾಗಿದ್ದ ಕಾರಣ ಮದುವೆ ಮಾಡುತ್ತಿದ್ದೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕೋವಿಡ್ ಹತೋಟಿಗೆ ಬಂದ ನಂತರ ಗೆಳೆಯರಿಗೆ ಮದುವೆ ಪಾರ್ಟಿ ಕೊಡುತ್ತೇವೆ ಎಂದು ವರ ಪ್ರಸನ್ನ ಹೇಳಿದ್ದಾರೆ.