ಉಡುಪಿ: ಸಾವರ್ಕರ್ಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಹಾಗಾಗಿ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಅಂತಾ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ಸಾವರ್ಕರ್ ಕುಟುಂಬವೇ ತಮ್ಮ ಜೀವವನ್ನು ತ್ಯಾಗ ಮಾಡಿದೆ. ಸಿದ್ದರಾಮಯ್ಯಗೆ ವೋಟು, ಜಾತಿ, ಧರ್ಮ ಮಾತ್ರ ಕಾಣುತ್ತೆ. ನಮಗೆ ಸಾವರ್ಕರ್ ಅವರ ತ್ಯಾಗ ಮುಖ್ಯ. ಅವರಿಗೆ ಭಾರತ ರತ್ನ ಗೌರವ ಸಿಗಬೇಕು. ಇದು ಸಿದ್ದರಾಮಯ್ಯರಂತಹ ರಾಜಕಾರಣಿಗಳಿಗೆ ಅರ್ಥ ಆಗಲ್ಲ.
ಸಿದ್ದರಾಮಯ್ಯನಂತಹ ರಾಜಕಾರಣಿಗಳಿಗೆ ಇದು ಅರ್ಥ ಆಗಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಿದ್ದರಾಮಯ್ಯ ತಿಳಿದುಕೊಳ್ಳಲಿ. ಅವರ ಸರ್ಟಿಫಿಕೇಟ್ ಸಾವರ್ಕರ್ಗೆ ಬೇಡ ಎಂದು ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ಇನ್ನು ಡಿಕೆಶಿ ಜಾಮೀನು, ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಅವರ ಬಿಡುಗಡೆಗೆ ವಿಜಯೋತ್ಸವ ಯಾಕೆ? ಸಿದ್ದರಾಮಯ್ಯನವರೇ ಯಾಕೆ ವಿಜಯೋತ್ಸವ ಮಾಡ್ತಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ. ಡಿಕೆಶಿ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲಿನಿಂದ ಬಿಡುಗಡೆಯಾಗಿದ್ದಾರಾ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ರು.
ಡಿಕೆಶಿ ಅವರ ಇನ್ನೂ ಅನೇಕ ಕೇಸ್ಗಳು ತನಿಖಾ ಹಂತದಲ್ಲಿವೆ. ಕೋರ್ಟ್ನಲ್ಲಿ ವಿಚಾರಣೆ ನಡಿತೀದೆ. ಡಿಕೆಶಿ ಅವರ ಕೇಸ್ಗಳ ವಿಚಾರಣೆ ಮೊದಲು ಮುಗೀಲಿ. ಡಿಕೆಶಿ ಚುನಾವಣಾ ರಾಜಕೀಯಕ್ಕೆ ನಂತರ ಬರಲಿ ಎಂದರು.