ETV Bharat / state

ಕಾಶ್ಮೀರ-ಪಾಕಿಸ್ತಾನ ಉಗ್ರರು ಮಂಗಳೂರಿಗೆ ಬಂದಿರುವ ಶಂಕೆ ಕಾಡುತ್ತಿದೆ: ಶೋಭಾ ಕರಂದ್ಲಾಜೆ

author img

By

Published : Nov 27, 2020, 5:39 PM IST

ಮಂಗಳೂರಿನಲ್ಲಿ ಲಷ್ಕರ್ ಪರ ಗೋಡೆ ಬರಹದ ಹಿಂದಿರುವ ಶಕ್ತಿ ಯಾರು ಎಂದು ರಾಜ್ಯ ಸರ್ಕಾರ ತಕ್ಷಣ ಕಂಡು ಹಿಡಿಯಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
Shobha Karandlaje

ಉಡುಪಿ: ಮಂಗಳೂರಿನಲ್ಲಿ ಲಷ್ಕರ್ ಪರ ಗೋಡೆ ಬರಹ ವಿಚಾರಕ್ಕೆ ಸಂಬಂಧಿಸಿದಂತೆ ಕಾಶ್ಮೀರ-ಪಾಕಿಸ್ತಾನದ ಉಗ್ರರು ಮಂಗಳೂರು ತನಕ ಬಂದಿದ್ದಾರಾ ಎಂಬ ಸಂಶಯ ಕಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರ ಈ ಬರಹದ ಹಿಂದಿರುವ ಶಕ್ತಿ ಯಾರು ಎಂದು ಕಂಡು ಹಿಡಿಯಬೇಕು. ಇವರು ಮಂಗಳೂರಿನವರಾ? ಕೇರಳದವರಾ? ಅಥವಾ ಕಾಶ್ಮೀರಿಗಳಾ? ಎಂದು ಕಂಡುಹಿಡಿಯಬೇಕು. ಗೃಹ ಇಲಾಖೆ ತಕ್ಷಣ ಕಟ್ಟೆಚ್ಚರ ವಹಿಸಬೇಕು. ಹಾಗೂ ಕೇಂದ್ರ ಗೃಹ ಮಂತ್ರಿಗಳು ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡುವುದಾಗಿ ಹೇಳಿದ್ದಾರೆ.

ಸುಳ್ಯದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಂಜೆ, ಒಂದು ಕೋಮಿನ ಜನ ಕೇಂದ್ರದಲ್ಲಿ ತ್ರಿವಳಿ ತಲಾಖ್ ರದ್ದಾದಾಗ ಕೂಡ ವಿರೋಧಿಸಿದ್ದರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯ ಬಂದ್ ಆಗಬೇಕು. ರಾಜ್ಯ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ ಮಾಡಲಿದೆ. ಲವ್ ಜಿಹಾದ್ ನಿಲ್ಲಿಸಲು ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸುವಂತೆ ಮುಖ್ಯಮಂತ್ರಿಳಿಗೆ ತಿಳಿಸುವುದಾಗಿ ಹೇಳಿದರು.

ಗೋ ಹತ್ಯೆ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿ, 2008ರಲ್ಲೇ ಈ ಕಾನೂನನ್ನು ನಾವು‌‌ ಮಾಡಿದ್ದೆವು. ಆದರೆ ಅಂದಿನ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು. ಗೋ ಹತ್ಯಾ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಗೋ ಹತ್ಯೆ ಮಾಡುವವರಿಗೆ ಬಲವಾದ ಶಿಕ್ಷೆ ಕೊಡುವ ಕಾನೂನು ಬರಬೇಕು. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಕಾನೂನು ಜಾರಿಯಾಗಬೇಕೆಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.