ಉಡುಪಿ: ಕುಂದಾಪುರ ಅಂಕದಕಟ್ಟೆಯಲ್ಲಿ ಬಾವಿಗೆ ಬಿದ್ದ ವೃದ್ಧನನ್ನ ರಕ್ಷಣೆ ಮಾಡಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಮುಳುಗುತ್ತಿದ್ದ ವೃದ್ಧನನ್ನು ರಕ್ಷಿಸಿದ್ದಾರೆ. ಅಚ್ಯುತ ( 80) 30 ಅಡಿ ಆಳದ ಬಾವಿಗೆ ಬಿದ್ದು ಬದುಕಿ ಬಂದವರು.
ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಬಾವಿಗೆ ಬಿದ್ದಿದ್ದ ಅಚ್ಯುತರ ರಕ್ಷಣೆಗಾಗಿ ಮನೆಯವರು ತಕ್ಷಣ ಕುಂದಾಪುರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ರು. ಬಾವಿಗೆ ಇಳಿದ ಅಗ್ನಿಶಾಮಕ ಸಿಬ್ಬಂದಿ ನಾಗರಾಜ್ ಪೂಜಾರಿ ಅವರು ವೃದ್ಧರ ರಕ್ಷಣೆ ಮಾಡಿದ್ದಾರೆ.