ETV Bharat / state

ರಸ್ತೆ ಅಪಘಾತ: ಪಿಯುಸಿ ವಿದ್ಯಾರ್ಥಿ ಸಾವು - ಉಡುಪಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಸಾವು

ರಸ್ತೆ ದಾಟುತ್ತಿರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ.

Accident
Accident
author img

By

Published : Aug 17, 2020, 4:30 PM IST

ಉಡುಪಿ: ಪಿಯುಸಿ ಅಡ್ಮಿಷನ್ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ.

ಕಿಶನ್ ಖಾರ್ವಿ (17) ಮೃತ ವಿದ್ಯಾರ್ಥಿ. ದ್ವಿತೀಯ ಪಿಯುಸಿ ಅಡ್ಮಿಷನ್ ಮುಗಿಸಿ ಜೆರಾಕ್ಸ್ ಮಾಡಿಸಲು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಾಲೇಜಿನ ಎದುರು ರಸ್ತೆ ದಾಟುವಾಗ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.