ETV Bharat / state

ಅಡ್ಡಾದಿಡ್ಡಿ ಲಾರಿ ಚಾಲನೆ, ಚೇಸ್​ ಮಾಡಿ ವಶಕ್ಕೆ ಪಡೆದ ಕಾಪು ಎಸ್​​ಐ: ಸಾರ್ವಜನಿಕರಿಂದ ಮೆಚ್ಚುಗೆ - ಉಡುಪಿ ಲೇಟೆಸ್ಟ್​ ನ್ಯೂಸ್

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಚಾಲಕನೊಬ್ಬ ಲಾರಿ ಓಡಿಸುತ್ತಿದ್ದ. ಈ ಕುರಿತು ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತರಾದ ಎಸ್​ಐ ರಾಘವೇಂದ್ರ ಲಾರಿ ಚೇಸ್​ ಮಾಡಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕಾಪು ಎಸ್​​ಐ ರಾಘವೇಂದ್ರ
Kapu S I Raghavendra
author img

By

Published : Jan 24, 2021, 2:43 PM IST

ಕಾಪು(ಉಡುಪಿ): ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಚಾಲಕನೊಬ್ಬ ಲಾರಿ ಓಡಿಸುತ್ತಿದ್ದ. ಈ ಕುರಿತು ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತರಾದ ಎಸ್​ಐ ರಾಘವೇಂದ್ರ ಲಾರಿ ಚೇಸ್​ ಮಾಡಿ ಚಾಲಕನನ್ನು ವಶಕ್ಕೆ ಪಡೆದು ಭಾರಿ ಅನಾಹುತ ತಪ್ಪಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಅಡ್ಡಾದಿಡ್ಡಿ ಲಾರಿ ಚಾಲನೆ

ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಕುಡಿದ ಅಮಲಿನಲ್ಲಿ ಚಾಲಕ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದ. ಈ ಬಗ್ಗೆ ಹಿಂದೆ ಸಾಗುತ್ತಿದ್ದ ವಾಹನ ಸವಾರರು ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತರಾದ ಕಾಪು ಎಸ್​ಐ ರಾಘವೇಂದ್ರ ಲಾರಿಯನ್ನು ತಡೆದು ಚಾಲಕ ಮತ್ತು ‌ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಪು ಎಸ್​ಐ ರಾಘವೇಂದ್ರ ಅವರ ಸಮಯಪ್ರಜ್ಞೆಯಿಂದಾಗಿ ಲಾರಿ ಚಾಲಕನಿಂದ ಉಂಟಾಗುತ್ತಿದ್ದ ಅನಾಹುತ ತಪ್ಪಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.