ಉಡುಪಿ: ದೇಶದ್ರೋಹ ಕೆಲಸ ಮಾಡುವ ಹಾಗೂ ಪಾಕ್ ಪರ ಘೋಷಣೆ ಕೂಗುವವರಿಗೆ ಎನ್ಕೌಂಟರ್ ತಕ್ಕ ಉತ್ತರ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಎನ್ಕೌಂಟರ್ ಮಾಡಬೇಕು. ಪ್ರಕರಣದ ತನಿಖೆ ಮತ್ತು ಆರೋಪಿಗಳ ವಿಚಾರಣೆ ನಡೆಸುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಭಾರತದಲ್ಲಿ ಹುಟ್ಟಿ ಬೆಳೆದವರು ಪಾಕ್ ಪರ ಘೋಷಣೆ ಕೂಗ್ತಾರೆ. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಮನಸ್ಸಲ್ಲಿ ಪಾಕ್ ಜಪ ಮಾಡುತ್ತಾರೆ. ಸಿಎಎ ವಿರೋಧಿ ಹೋರಾಟಗಾರರಲ್ಲಿ ಪಾಕ್ ಪರ ಭಾವನೆಗಳಿವೆ. ಈ ಪೈಕಿ ಇಬ್ಬರ ಭಾವನೆ ಬಹಿರಂಗಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ಈವರೆಗೆ ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ಸಿಗುತ್ತಿತ್ತು. ನಕ್ಸಲರನ್ನು ಬೆಂಬಲಿಸುವ ಎಡಪಂಥೀಯ ಚಿಂತನೆಯ ಯುವತಿ ಅಮೂಲ್ಯ ದೇಶದಲ್ಲಿ ಅಭದ್ರತೆ, ಅಶಾಂತಿ ಸೃಷ್ಟಿಸಲು ಈ ರೀತಿಯ ಹೇಳಿಕೆ ನೀಡಿದ್ದಾಳೆ. ಇದರ ಹಿಂದಿರುವ ಷಡ್ಯಂತ್ರ ಬಯಲಾಗಬೇಕು ಎಂದು ಆಗ್ರಹಿಸಿದರು.