ಉಡುಪಿ : ಸಂತೋಷ್ ಪಂಚನಾಮೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅವರ ಕುಟುಂಬಸ್ಥರು ಶಾಂಭವಿ ಲಾಡ್ಜ್ನಿಂದ ಹೊರಗೆ ಬಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ಮೂವರು ಆರೋಪಿಗಳ ಬಂಧನ ಆಗುವ ತನಕ ಮೃತದೇಹವನ್ನು ತೆಗೆಯುವುದಿಲ್ಲ. ಸಚಿವ ಈಶ್ವರಪ್ಪ, ಬಸವರಾಜ, ರಮೇಶ್ ಬಂಧನದ ನಂತರ ಮುಂದಿನ ಪ್ರಕ್ರಿಯೆ ಮಾಡುತ್ತೇವೆ. ನಾವು ಪೊಲೀಸರಿಗೆ ಇಲ್ಲಿತನಕ ತನಿಖೆಗೆ ಎಲ್ಲಾ ಸಹಕಾರ ಕೊಟ್ಟಿದ್ದೇವೆ ಎಂದು ಸಂತೋಷ್ ಸಹೋದರ ಪ್ರಶಾಂತ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಆಗುವ ಮೊದಲು ಆರೋಪಿಗಳ ಬಂಧನ ಆಗಬೇಕು. ಉಡುಪಿಯ ಶಾಂಭವಿ ಲಾಡ್ಜ್ನಿಂದ ಮೃತದೇಹವನ್ನು ಮಣಿಪಾಲಕ್ಕೆ ರವಾನೆ ಮಾಡಲು ಬಿಡುವುದಿಲ್ಲ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಸರ್ಕಾರಕ್ಕೆ ನಾವು ಈಗಾಗಲೇ ನಮ್ಮ ಮನವಿಯನ್ನು ನೀಡಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸಂತೋಷ್ ಆತ್ಮಕ್ಕೆ ಶಾಂತಿ ಸಿಗಲೆಂದು ನಾವು ಈ ನಿರ್ಧಾರ ಮಾಡಿದ್ದೇವೆ ಎಂದು ಪ್ರಶಾಂತ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ:'108 ಕಾಮಗಾರಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದೇ ಈಶ್ವರಪ್ಪ': ಹಿಂಡಲಗಾ ಗ್ರಾಪಂ ಅಧ್ಯಕ್ಷ