ETV Bharat / state

ವಿಶಾಲಾ​ ಗಾಣಿಗ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಸಿಬ್ಬಂದಿಗೆ ನಗದು ಪುರಸ್ಕಾರ ನೀಡಿ ಅಭಿನಂದನೆ - Udupi Murder Case

ಜುಲೈ 12 ರಂದು ವಿಶಾಲಾ​ ಗಾಣಿಗ ಎಂಬವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್​​ನ ಅವರ ವಾಸದ ಫ್ಲ್ಯಾಟ್‌ನಲ್ಲಿಯೇ ಸುಫಾರಿ ಕಿಲ್ಲರ್​ಗಳು ಹತ್ಯೆ ಮಾಡಿದ್ದರು. ಪ್ರಕರಣದ ಆರೋಪಿಗಳು ತುಂಬಾ ಚಾಕಚಕ್ಯತೆಯಿಂದ ಕೊಲೆ ಮಾಡಿದ್ದರು. ಹೀಗಾಗಿ ಈ ಪ್ರಕರಣವನ್ನು ಭೇದಿಸುವುದು ಕ್ಲಿಷ್ಟಕರವಾಗಿತ್ತು. ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು.

Udupi
ವಿಶಾಲ ಗಾಣಿಗ ಕೊಲೆ ಪ್ರಕರಣ
author img

By

Published : Sep 24, 2021, 9:47 AM IST

Updated : Sep 24, 2021, 12:39 PM IST

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ವರದಿಯಾದ ವಿಶಾಲಾ​ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

ಜುಲೈ 12 ರಂದು ವಿಶಾಲ ಗಾಣಿಗ ಎಂಬವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್​​ನ ಅವರ ವಾಸದ ಫ್ಲ್ಯಾಟ್‌ನಲ್ಲಿಯೇ ಸುಪಾರಿ ಕಿಲ್ಲರ್​ಗಳು ಹತ್ಯೆ ಮಾಡಿದ್ದರು. ಪ್ರಕರಣದ ಆರೋಪಿಗಳು ತುಂಬಾ ಚಾಕಚಕ್ಯತೆಯಿಂದ ಕೊಲೆ ಮಾಡಿದ್ದರು. ಹೀಗಾಗಿ ಪ್ರಕರಣ ಭೇದಿಸುವುದು ಕ್ಲಿಷ್ಟಕರವಾಗಿತ್ತು. ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು.

ಉಡುಪಿ ಜಿಲ್ಲಾ ಎಸ್​ಪಿ ವಿಷ್ಣುವರ್ಧನ್ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಿದ್ದರು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಸ್ವಾಮಿನಾಥನ್ ನಿಶಾದ್​ ಎಂಬಾತನನ್ನು ಬಂಧಿಸಿದ ನಂತರ, ವಿಶಾಲಾ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗನೇ ಈ ಕೊಲೆ ಮಾಡಲು ಸುಪಾರಿ ನೀಡಿದ್ದನೆಂದು ತಿಳಿದು ಬಂದಿತ್ತು.

ಈ ಪ್ರಕರಣವನ್ನು ಭೇದಿಸಿದ ಸಿಬ್ಬಂದಿಗೆ ಕರ್ನಾಟಕ ರಾಜ್ಯ ಡಿಜಿ & ಐಜಿಪಿ ಪ್ರವೀಣ್ ಸೂದ್ 50 ಸಾವಿರ ರೂ. ನಗದು ಪುರಸ್ಕಾರ ಘೋಷಿಸಿದ್ದರು. ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿಯವರು ಸಿಬ್ಬಂದಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್​​ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ ನಾಯಕ್, ಅನಂತ ಪದ್ಮನಾಭ, ಸಿಪಿಐ ಬ್ರಹ್ಮಾವರ, ಮಂಜುನಾಥ ಗೌಡ, ಪಿಐ ಮಣಿಪಾಲ, ಶರಣ್ ಗೌಡ, ಸಿಪಿಐ ಮಲ್ಪೆ, ಸಂಪತ್ ಕುಮಾರ್, ಸಿಪಿಐ ಕಾರ್ಕಳ, ಪಿಎಸ್ಐಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿಡಿಆರ್ ವಿಭಾಗದ ಸಿಬ್ಬಂದಿ ಶಿವಾನಂದ, ದಿನೇಶ್, ನಿತಿನ್​ ಅವರನ್ನು ಅಭಿನಂದಿಸಲಾಗಿದೆ.

Last Updated : Sep 24, 2021, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.